ಪಾಕ್ ಡ್ರೋಣ್ ದಾಳಿಗೆ ಮುಂದಾಗಿದ್ದೇಕೆ: ಇಂಡೋ-ಪಾಕ್ ಗಡಿಯಲ್ಲಿ ಮತ್ತೊಂದು ಡ್ರೋಣ್ ವಶಕ್ಕೆ!
ಆರ್ಟಿಕಲ್ 370 ಕಿತ್ತು ಹಾಕಿದ ನಂತರ ಪಾಕಿಸ್ತಾನ ಇನ್ನಿಲ್ಲದಂತೆ ಭಾರತದ ವಿರುದ್ಧ ಮಸಲತ್ತು ಮಾಡುತ್ತಿದ್ದು ಇದೀಗ ಡ್ರೋಣ್ ಮೂಲಕ ಭಾರತದ ಗಡಿಯಲ್ಲಿ ಉಪಟಲ ನೀಡುತ್ತಿದೆ.

ಅಟಾರಿ: ಆರ್ಟಿಕಲ್ 370 ಕಿತ್ತು ಹಾಕಿದ ನಂತರ ಪಾಕಿಸ್ತಾನ ಇನ್ನಿಲ್ಲದಂತೆ ಭಾರತದ ವಿರುದ್ಧ ಮಸಲತ್ತು ಮಾಡುತ್ತಿದ್ದು ಇದೀಗ ಡ್ರೋಣ್ ಮೂಲಕ ಭಾರತದ ಗಡಿಯಲ್ಲಿ ಉಪಟಲ ನೀಡುತ್ತಿದೆ.
ಪಂಜಾಬ್ ನಲ್ಲಿ ಪಾಕ್ ಡ್ರೋಣ್ ಗಳು ಶಾಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಬೀಳಿಸುತ್ತಿತ್ತು. ಕಳೆದ ಮೂರು ದಿನಗಳಲ್ಲಿ ಪಂಜಾಬ್ ಪೊಲೀಸರು ಎರಡನೇ ಡ್ರೋಣ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಪೊಲೀಸರು ಅರೆ ಸುಟ್ಟಿದ್ದ ಡ್ರೋಣ್ ಅನ್ನು ವಶಕ್ಕೆ ಪಡೆದಿದ್ದರು. ಇದೀಗ ಡ್ರೋಣ್ ಬಿದ್ದಿರುವುದನ್ನು ಅನ್ನು ಕಂಡ ಮಹವಾ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ಸದ್ಯ ಡ್ರೋಣ್ ಅನ್ನು ವಶಕ್ಕೆ ಪಡೆದಿದ್ದಾರೆ.
ಪಂಜಾಬ್ ಮತ್ತು ನೆರೆಯ ರಾಜ್ಯಗಳಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಲು ಭಯೋತ್ಪಾದಕರ ಗುಂಪು ಸಂಚು ರೂಪಿಸುತ್ತಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


