ದೇಶ

ಅಯೋಧ್ಯೆ ವಿವಾದ: ಅ.18ರ ಬಳಿಕ ವಾದ-ಪ್ರತಿವಾದಕ್ಕೆ ಒಂದು ದಿನವೂ ಅವಕಾಶವಿಲ್ಲ; ಸುಪ್ರೀಂಕೋರ್ಟ್

ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಕುರಿತು ವಾದ-ಪ್ರತಿವಾದಗಳನ್ನು ಅ.18ರ ಗಡುವಿನೊಳಗೆ ಪೂರ್ಣಗೊಳಿಸಿ, ಗಡುವು ಪೂರ್ಣಗೊಂಡರೆ ಒಂದು ದಿನವೂ ಕಾಲವಕಾಶ ನೀಡುವುದಿಲ್ಲ ಎಂದು ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳಿಗೆ ಸುಪ್ರೀಂಕೋರ್ಟ್ ಗುರುವಾರ ಸೂಚಿಸಿದೆ.

ಅಯೋಧ್ಯೆ ವಿವಾದ: ಅ.18ರ ಬಳಿಕ ವಾದ-ಪ್ರತಿವಾದಕ್ಕೆ ಒಂದು ದಿನವೂ ಅವಕಾಶವಿಲ್ಲ; ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್
Published On :

ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಕುರಿತು ವಾದ-ಪ್ರತಿವಾದಗಳನ್ನು ಅ.18ರ ಗಡುವಿನೊಳಗೆ ಪೂರ್ಣಗೊಳಿಸಿ, ಗಡುವು ಪೂರ್ಣಗೊಂಡರೆ ಒಂದು ದಿನವೂ ಕಾಲವಕಾಶ ನೀಡುವುದಿಲ್ಲ ಎಂದು ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳಿಗೆ ಸುಪ್ರೀಂಕೋರ್ಟ್ ಗುರುವಾರ ಸೂಚಿಸಿದೆ. 

32ನೇ ದಿನವಾದ ಇಂದು ನ್ಯಾಯಾಲಯಕ್ಕೆ ಹಾಜರಾದ ಹಿಂದೂ ಹಾಗೂ ಮುಸ್ಲಿಂ ಪರ ವಕೀಲರು ಎಂದಿನಂತೆ ತಮ್ಮ ವಾದ ಮಂಡನೆ ಮಾಡಿದರು. ಅಯೋಧ್ಯೆಯಲ್ಲಿರುವ ವಿವಾದಿತ 2.77 ಎಕರೆ ಜಾಗದ ಮಾಲೀಕತ್ವದ ಕುರಿತು ವಾದ ಮಂಡನೆ ಮಾಡಿದ್ದಾರೆ. 

ಅಯೋಧ್ಯೆ ಭೂ ವಿವಾದ ಕುರಿತ ಎಲ್ಲಾ ವಾದ ಹಾಗೂ ಪ್ರತಿವಾದಗಳನ್ನು ಅಕ್ಟೋಬರ್ 14ರೊಳಗಾಗಿ ಪೂರ್ಣಗೊಳಿಸಲು ನ್ಯಾಯಾಲಯ ನಿರ್ಧರಿಸಿದೆ ಎಂದು ಹೇಳಲಾಗುತ್ತಿದ್ದು, ಇನ್ನುಳಿದ ನಾಲ್ಕು ದಿನಗಳಲ್ಲಿ ಅಂತಿಮ ತೀರ್ಪು ನೀಡಲು ನ್ಯಾಯಾಲಯ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. 

ನ್ಯಾಯಾಲಯಕ್ಕೆ ಹಾಜರಾದ ಸುನ್ನಿ ವಕ್ಫ್ ಮಂಡಳಿಯ ಪರ ವಕೀಲ ರಜೀವ್ ಧವನ್ ಅವರು, ವಾದ ಹಾಗೂ ಪ್ರತಿವಾದಗಳಿಗೆ ದಿನದಲ್ಲಿ 1 ಗಂಟೆ ಹೆಚ್ಚಾಗಿ ನೀಡುವಂತೆ ಹಾಗೂ ಶನಿವಾರ ಕೂಡ ವಿಚಾರಣೆ ನಡೆಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡರು. 

ಈ ವೇಳೆ ಪ್ರತಿಕ್ರಿಯೆ ನೀಡಿರುವ ನ್ಯಾಯಾಲಯ, ವಾದ ಹಾಗೂ ಪ್ರತಿವಾದ ಕೇಳಲು ಇನ್ನು 10 ದಿನಗಳು ಬಾಕಿಯಿವೆ. ಅ.18ರ ಬಳಿಕ ಒಂದು ದಿನ ಕೂಡ ವಾದ ಹಾಗೂ ಪ್ರತಿವಾದಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.