ಒಂದು ಸಿಹಿ ಮುತ್ತಿಗಾಗಿ ಪ್ರಾಣದ ಗೆಳೆತಿಯನ್ನೇ ಕೊಂದ ಗೆಳೆಯ, ದೇಹವನ್ನು ಏನು ಮಾಡಿದ ಗೊತ್ತ?
ಕ್ಲಾಸ್ ಮುಗಿದ ಬಳಿಕ ನಿರ್ಜನ ಪ್ರದೇಶಕ್ಕೆ ತೆರಳಿದ್ದ ಗೆಳೆಯನೊಬ್ಬ ಗೆಳತಿ ಕಿಸ್ ಮಾಡಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಕೊಂದಿರುವ ದಾರುಣ ಘಟನೆ ನಡೆದಿದೆ.

ಭೋಪಾಲ್: ಕ್ಲಾಸ್ ಮುಗಿದ ಬಳಿಕ ನಿರ್ಜನ ಪ್ರದೇಶಕ್ಕೆ ತೆರಳಿದ್ದ ಗೆಳೆಯನೊಬ್ಬ ಗೆಳತಿ ಕಿಸ್ ಮಾಡಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಕೊಂದಿರುವ ದಾರುಣ ಘಟನೆ ನಡೆದಿದೆ.
ಮಧ್ಯಪ್ರದೇಶದ ಜಬಲಾಪುರ ಜಿಲ್ಲೆಯ ಬಿಜಾಪುರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. 19 ವರ್ಷದ ರಮಣ್ ಸಿಂಗ್ ಎಂಬಾತ 18 ವರ್ಷದ ಗೆಳತಿಯನ್ನು ಕೊಲೆ ಮಾಡಿದ್ದು ಈ ಸಂಬಂಧ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಗೆಳತಿಯನ್ನು ಕಾಡಿಗೆ ಕರೆದುಕೊಂಡು ಹೋಗಿದ್ದ ರಮಣ್ ಸಿಂಗ್ ಆಕೆಗೆ ಮುತ್ತು ಕೊಡಲು ಮುಂದಾಗಿದ್ದಾನೆ. ಆಗ ಗೆಳತಿ ಇದಕ್ಕೆ ನಿರಾಕರಿಸಿದ್ದು ಆತನನ್ನು ದೂರು ತಳ್ಳಿದ್ದಾಳೆ. ಇದರಿಂದ ಕೋಪಗೊಂಡ ರಮಣ್ ಸಿಂಗ್ ಆಕೆಯನ್ನು ಜೋರಾಗಿ ದೂಡಿದ್ದಾನೆ. ಪರಿಣಾಮ ಆಕೆಯ ತಲೆ ಬಂಡೆಗೆ ತಗುಲಿದೆ.
ಕೂಡಲೇ ಆಕೆ ಪ್ರಜ್ಞೆ ತಪ್ಪಿದ್ದರಿಂದ ಗಾಬರಿಗೊಂಡ ರಮಣ್ ಮುಂದೇನು ಮಾಡಬೇಕು ಎಂದು ತೋಚದೆ ಆಕೆಯ ದೇಹವನ್ನು ಎಲೆಗಳಿಂದ ಮುಚ್ಚಿ ಮನೆಗೆ ಹೋಗಿದ್ದಾನೆ. ನಿರ್ಜನ ಪ್ರದೇಶದಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ತನಿಖೆಗೆ ಕೈಗೊಂಡ ಪೊಲೀಸರಿಗೆ ಇದೀಗ ಆರೋಪಿ ರಮಣ್ ಸಿಂಗ್ ನಡೆದ ಘಟನೆಯನ್ನು ವಿವರಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


