ದೇಶ

ದೆಹಲಿ: ಸರ ಕಿತ್ತು ಓಡಿ ಹೋಗಲೆತ್ನಿಸಿದ ದರೋಡೆಕೋರನಿಗೆ ಚೆನ್ನಾಗಿ ಥಳಿಸಿದ ಮಹಿಳೆ, ವ್ಯಾಪಕ ಪ್ರಶಂಸೆ 

ಕುತ್ತಿಗೆಯಿಂದ ಸರವನ್ನು ಕದ್ದು ಪರಾರಿಯಾಗಲು ಯತ್ನಿಸಿದ ದರೋಡೆಕೋರರನ್ನು ತಪ್ಪಿಸಿಕೊಳ್ಳಲು ಬಿಡದೆ ಹಿಡಿದು ಮಹಿಳೆ ಚೆನ್ನಾಗಿ ಥಳಿಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ದೆಹಲಿ: ಸರ ಕಿತ್ತು ಓಡಿ ಹೋಗಲೆತ್ನಿಸಿದ ದರೋಡೆಕೋರನಿಗೆ ಚೆನ್ನಾಗಿ ಥಳಿಸಿದ ಮಹಿಳೆ, ವ್ಯಾಪಕ ಪ್ರಶಂಸೆ 
ದರೋಡೆಕೋರನನ್ನು ಹಿಡಿದು ಮಹಿಳೆ ಹೊಡೆಯುತ್ತಿರುವುದು
Published On :

ನವದೆಹಲಿ: ಕುತ್ತಿಗೆಯಿಂದ ಸರವನ್ನು ಕದ್ದು ಪರಾರಿಯಾಗಲು ಯತ್ನಿಸಿದ ದರೋಡೆಕೋರರನ್ನು ತಪ್ಪಿಸಿಕೊಳ್ಳಲು ಬಿಡದೆ ಹಿಡಿದು ಮಹಿಳೆ ಚೆನ್ನಾಗಿ ಥಳಿಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಕಳೆದ ಆಗಸ್ಟ್ 30ರಂದು ಈ ಘಟನೆ ದೆಹಲಿಯ ನಂಗ್ಲೊಯ್ ಎಂಬಲ್ಲಿ ನಡೆದಿದೆ. ಮಹಿಳೆಯ ಧೈರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮಹಿಳೆ ಬಾಲಕಿಯೊಂದಿಗೆ ಸೈಕಲ್ ರಿಕ್ಷಾದಿಂದ ಇಳಿದು ಹಣ ನೀಡಿ ರಸ್ತೆ ದಾಟುತ್ತಿದ್ದ ವೇಳೆ ಇಬ್ಬರು ಬೈಕ್ ನಲ್ಲಿ ಬಂದು ಮಹಿಳೆಯ ಕುತ್ತಿಗೆಯಿಂದ ಸರ ಕಿತ್ತುಕೊಂಡರು. 


ಕೂಡಲೇ ಸಮಯ ಪ್ರಜ್ಞೆ ಮತ್ತು ಧೈರ್ಯ ಮೆರೆದ ಮಹಿಳೆ ಬೈಕ್ ನ ಹಿಂಬದಿ ಸವಾರನನ್ನು ಹಿಡಿದು ಅವರು ತಪ್ಪಿಸಿಕೊಂಡು ಹೋಗುವುದನ್ನು ತಡೆದರು. ಬೈಕ್ ಸವಾರ ತಪ್ಪಿಸಿಕೊಂಡು ಓಡಿಹೋಗಿದ್ದು ಆತನನ್ನು ಹಿಡಿಯಲು ಪೊಲೀಸರು ಬಲೆಬೀಸಿದ್ದಾರೆ.ಚೈನ್ ಕಿತ್ತುಕೊಂಡ ಹಿಂಬದಿ ಸವಾರನನ್ನು ಅಲ್ಲಿ ಸೇರಿದ ಜನರು ಚೆನ್ನಾಗಿ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.


ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮಹಿಳೆ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.