ನೀಲಿ ಚಿತ್ರದ ಫೋಟೋ ತೋರಿಸಿ ಕಾಶ್ಮೀರಿ ಯುವಕ ಎಂದ ಪಾಕ್ ಮಾಜಿ ರಾಯಭಾರಿ!
ಪೋರ್ನ್ ತಾರೆಯನ್ನು ಗಾಯಗೊಂಡಿರುವ ಕಾಶ್ಮೀರಿ ಯುವಕ ಎಂದು ಟ್ವೀಟ್ ಮಾಡುವ ಮೂಲಕ ಭಾರತದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ.

ನವದೆಹಲಿ: ಪೋರ್ನ್ ತಾರೆಯನ್ನು ಗಾಯಗೊಂಡಿರುವ ಕಾಶ್ಮೀರಿ ಯುವಕ ಎಂದು ಟ್ವೀಟ್ ಮಾಡುವ ಮೂಲಕ ಭಾರತದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಸಿತ್ ಪಾಕಿಸ್ತಾನಕ್ಕೆ ಮುಜುಗರವನ್ನುಂಟು ಮಾಡಿದ್ದಾರೆ.
ಅಬ್ದುಲ್ ಬಸಿತ್ ಅವರಿಗೆ ಪೋರ್ನ್ ತಾರೆ ಜಾನಿ ಸಿನ್ಸ್ ಅವರ ಭಾವ ಚಿತ್ರದ ದೊರಕಿದೆ. ಕಾಶ್ಮೀರದಲ್ಲಿ ಭಾರತೀಯ ಪಡೆ ಸಿಡಿಸುವ ಗುಂಡಿನ ತುಣುಕು ಬಡಿದು ಗಾಯಗೊಂಡಿರುವ ಕಾಶ್ಮೀರಿ ಯುವಕ ಎಂದು ಈ ಚಿತ್ರವನ್ನು ಭಾವಿಸಿದ್ದಾರೆ. ಕೂಡಲೇ ಚಿತ್ರವನ್ನು ಸಾಮಾಜಿಕ ಜಾಲತಾಣ ಟ್ವಿಟರ್'ನಲ್ಲಿ ಪ್ರಕಟಿಸಿರುವ ಅವರು, ಅನಂತ್ ನಾಗ್ ಜಿಲ್ಲೆಯ ಯೂಸೂಫ್ ಚಿತ್ರವಿದು. ಪೆಲೆಟ್ ಗನ್ ಗಳಿಂದಾಗಿ ಈತ ಕಣ್ಣು ಕಳೆದುಕೊಂಡಿದ್ದಾನೆ. ಈತನ ಬಗ್ಗೆ ಧ್ವನಿ ಎತ್ತಿ ಬರೆದಿದ್ದಾರೆ.
ಅಬ್ದುಲ್ ಬಸಿತ್ ಪ್ರಕಟಿಸಿರುವ ಈ ಪೋಸ್ಟ್ ನ್ನು ಕಂಡು ಪತ್ರಕರ್ತ ನೈಲೈ ಇನಾಯತ್ ಅವರು, ತಮ್ಮ ದೇಶದ ಅಧಿಕಾರಿಯ ಜ್ಞಾನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Former Pakistani high commissioner to India Abdul Basit, mistakes Johnny Sins for a Kashmiri man who lost vision from pellet. Unreal times these, really. pic.twitter.com/9h1X8V8TKF
— Naila Inayat नायला इनायत (@nailainayat) September 2, 2019ನೀಲಿ ಚಿತ್ರಗಳ ತಾರೆ ಜಾನಿ ಸಿನ್ಸ್ ಅವರನ್ನು ಕಾಶ್ಮೀರಿ ಯುವಕ ಎಂದು ಅಬ್ದುಲ್ ಬಸಿತ್ ತಪ್ಪಾಗಿ ಭಾವಿಸಿಕೊಂಡಂತಾಗಿದೆ. ಅನಗತ್ಯ ಸಮಯದಲ್ಲಿ ಅನಗತ್ಯ ವಿವಾದ ಸೃಷ್ಟಿಯಾಗಿದೆ ಎಂದು ಟ್ವೀಟ್'ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆಯೇ ಅಬ್ದುಲ್ ಬಸಿತ್ ಅವರು ಪೋಸ್ಟ್ ನ್ನು ತೆಗೆದು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


