ದೇಶ

ಶಿವಸೇನೆಗೆ ಸೆಡ್ಡು; ಬಿಜೆಪಿಗೆ ಮತ್ತೋರ್ವ ಶಾಸಕನ ಬೆಂಬಲ, ಕುತೂಹಲ ಕೆರಳಿಸಿದ ಮಹಾ ಸರ್ಕಾರ ರಚನೆ

ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರದ ಸರ್ಕಾರ ರಚನೆ ಕಸರತ್ತು ವಿಚಾರ ಮತ್ತಷ್ಟು ರೋಚಕ ಘಟ್ಟ ತಲುಪಿದ್ದು, ಮತ್ತೋರ್ವ ಶಾಸಕ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.

ಶಿವಸೇನೆಗೆ ಸೆಡ್ಡು; ಬಿಜೆಪಿಗೆ ಮತ್ತೋರ್ವ ಶಾಸಕನ ಬೆಂಬಲ, ಕುತೂಹಲ ಕೆರಳಿಸಿದ ಮಹಾ ಸರ್ಕಾರ ರಚನೆ
ಫಡ್ನವಿಸ್ ಭೇಟಿ ಮಾಡಿದ ವಿನಯ್ ಕೋರೆ
Published On :

ಮುಂಬೈ: ತೀವ್ರ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರದ ಸರ್ಕಾರ ರಚನೆ ಕಸರತ್ತು ವಿಚಾರ ಮತ್ತಷ್ಟು ರೋಚಕ ಘಟ್ಟ ತಲುಪಿದ್ದು, ಮತ್ತೋರ್ವ ಶಾಸಕ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.

ಹೌದು.. ಈ ಹಿಂದೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿಯಾಗಿ ಸ್ಪರ್ಧಿಸಿದ್ದ ಶಿವಸೇನೆ ಮತ್ತು ಬಿಜೆಪಿ ನಡುವಿನ ಸರ್ಕಾರ ರಚನೆ ಹಗ್ಗಜಗ್ಗಾಟ ಮುಂದುವರೆದಿರುವಂತೆಯೇ ಬಿಜೆಪಿಗೆ ಬೆಂಬಲ ಘೋಷಣೆ ಮಾಡುತ್ತಿರುವ ಶಾಸಕರ ಪಟ್ಟಿ ಕೂಡ ಬೆಳೆಯುತ್ತಿದೆ.

ಇದಕ್ಕೆ ಇಂಬು ನೀಡುವಂತೆ ಮತ್ತೋರ್ವ ಶಾಸಕ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದು, ಕೊಲ್ಹಾಪುರದ ಜನಸೂರ್ಯ ಶಕ್ತಿ ಪಕ್ಷದ ಶಾಸಕ ವಿನಯ್ ಕೋರೆ ಅವರು ಬಿಜೆಪಿಗೆ ತಮ್ಮ ಬೆಂಬಲ ಘೋಷಣೆ ಮಾಡಿದ್ದಾರೆ. ಮಂಗಳವಾರ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿದ ಅವರು, ಬಿಜೆಪಿ ಸರ್ಕಾರ ರಚನೆಗೆ ತಮ್ಮ ಬೆಂಬಲವಿದೆ ಎಂದು ಘೋಷಣೆ ಮಾಡಿದ್ದಾರೆ. 

ಇನ್ನು ಸರ್ಕಾರದಲ್ಲಿ 50-50 ಅಧಿಕಾರ ಕೇಳುತ್ತಿರುವ ಶಿವಸೇನೆಗೆ ಈ ಬೆಳವಣೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಎಲ್ಲ ಬೆಳವಣಿಗೆಗಳನ್ನೂ ಗಂಭೀರವಾಗಿ ನೋಡುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.