ತಮಿಳು ನಾಡು: ಬೋರ್ ವೆಲ್ ಗುಂಡಿಗೆ ಬಿದ್ದ ಮಗು: ಸತತ 16 ಗಂಟೆಯಿಂದ ನಡೆಯುತ್ತಿದೆ ರಕ್ಷಣಾ ಕಾರ್ಯ
ತಮಿಳು ನಾಡಿನ ನಡುಕ್ಕಟುಪಟ್ಟಿ ಗ್ರಾಮದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗುವೊಂದು ಆಕಸ್ಮಿಕವಾಗಿ ಬೋರ್ವೆಲ್ ಗುಂಡಿಗೆ ಬಿದ್ದಿದ್ದು ರಕ್ಷಣಾ ಕಾರ್ಯ ಸತತ 16 ಗಂಟೆಗಳಿಂದ ಮುಂದುವರಿದಿದೆ.

ಚೆನ್ನೈ: ತಮಿಳು ನಾಡಿನ ನಡುಕ್ಕಟುಪಟ್ಟಿ ಗ್ರಾಮದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗುವೊಂದು ಆಕಸ್ಮಿಕವಾಗಿ ಬೋರ್ವೆಲ್ ಗುಂಡಿಗೆ ಬಿದ್ದಿದ್ದು ರಕ್ಷಣಾ ಕಾರ್ಯ ಸತತ 16 ಗಂಟೆಗಳಿಂದ ಮುಂದುವರಿದಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಸಿಬ್ಬಂದಿ ನಿನ್ನೆ ಸಾಯಂಕಾಲದಿಂದ ಮಗುವನ್ನು ಸುರಕ್ಷಿತವಾಗಿ ಹೊರತೆಗೆಯಲು ಹರಸಾಹಸಪಡುತ್ತಿದ್ದಾರೆ.
ಸುಜಿತ್ ಎಂಬ 2 ವರ್ಷದ ಮಗು ತನ್ನ ಮನೆಯ ಮುಂದಿರುವ 600 ಅಡಿ ಆಳದ ಬೋರ್ ವೆಲ್ ಗೆ ಬಿದ್ದಿದ್ದು ಸ್ಥಳದಲ್ಲಿ ಜಮಾಯಿಸಿರುವ ನೆರೆಹೊರೆಯ ಗ್ರಾಮಗಳ ಸಾವಿರಕ್ಕೂ ಹೆಚ್ಚು ಜನರು ಸೇರಿ ಮಗು ಸಾವನ್ನು ಗೆದ್ದು ಬದುಕಿ ಮೇಲೆ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಸಿಬ್ಬಂದಿಗೆ ಕಾರ್ಯದಲ್ಲಿ ತಿರುಚಿ, ಕೊಯಂಬತ್ತೂರು, ನಮಕ್ಕಲ್ ಮತ್ತು ಮದುರೈಯ ಹಲವು ಸರ್ಕಾರೇತರ ಸಂಘಟನೆಗಳು ಕೂಡ ಸಾಥ್ ನೀಡುತ್ತಿದ್ದಾರೆ. ರಕ್ಷಣಾ ಕಾರ್ಯ ನಡೆಸುತ್ತಿರುವ ವೇಳೆ ಮಗು ಮೂರು ಬಾರಿ ಹಗ್ಗಕ್ಕೆ ಬಂದಿದ್ದರೂ ಮೇಲೆತ್ತಲು ಸಾಧ್ಯವಾಗಿಲ್ಲ.
ನಿನ್ನೆ ಸಾಯಂಕಾಲ ಮನೆಯ ಮುಂದೆ ಆಟವಾಡುತ್ತಿದ್ದ ಮಗು ಕಾಣೆಯಾದಾಗಲೇ ಪೋಷಕರಿಗೆ ಮಗು ಬೋರ್ ವೆಲ್ ಗೆ ಬಿದ್ದಿದೆ ಎಂದು ಗೊತ್ತಾಗಿರುವುದು. ಇದನ್ನು 5 ವರ್ಷಗಳ ಹಿಂದೆ ಕೊರೆಯಲಾಗಿತ್ತು. ತಕ್ಷಣ ಪೊಲೀಸರಿಗೆ ವಿಷಯ ತಲುಪಿಸಲಾಯಿತು. ಅವರು ಜಿಲ್ಲಾಡಳಿತಕ್ಕೆ ಕರೆ ಮಾಡಿದರು. ಕೂಡಲೇ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಈ ಮಧ್ಯೆ 10 ಅಡಿ ಆಳದಲ್ಲಿ ಬಂಡೆ ಸಿಕ್ಕಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಗಿತ್ತು. ರಾತ್ರಿಯಿಡೀ ಕಾರ್ಯಾಚರಣೆ ಮುಂದುವರೆಸಿರುವ ಸಿಬ್ಬಂದಿ, ಬಾಲಕನ ರಕ್ಷಣೆಗಾಗಿ ಹರಸಾಹಸ ಪಡುತ್ತಿದ್ದಾರೆ. ಆರಂಭದಲ್ಲಿ ರಕ್ಷಣಾ ಸಿಬ್ಬಂದಿಗೆ ಮಗು 27 ಅಡಿ ಆಳದಲ್ಲಿ ಸಿಕ್ಕಿದ್ದನಂತೆ. ಆದರೆ ಮಣ್ಣು ಕುಸಿಯುತ್ತಾ ಹೋಗಿ, ಮಣ್ಣು ಒದ್ದೆಯಾಗಿದ್ದರಿಂದ 70 ಅಡಿ ಆಳಕ್ಕೆ ಮಗು ಜಾರಿ ಹೋದನು. ಈಗಾಗಲೇ 68 ಅಡಿ ಆಳ ಕೊರೆದಿದ್ದೇವೆ ಎನ್ನುತ್ತಾರೆ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


