ಮಹಿಳೆಯರ ಕಣ್ಣೀರಿನ ಶಾಪ ಇದು: ಅಜಂಖಾನ್ ಕುಸಿದುಬಿದ್ದಿದ್ದಕ್ಕೆ ಜಯಪ್ರದ ಪ್ರತಿಕ್ರಿಯೆ
ಚುನಾವಣಾ ರ್ಯಾಲಿಯಲ್ಲಿ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ರ್ಯಾಲಿಯಲ್ಲಿ ಕುಸಿದು ಬಿದ್ದಿದ್ದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ಜಯಪ್ರದ ತಿರುಗೇಟು ನೀಡಿದ್ದಾರೆ.

ರಾಂಪುರ: ಚುನಾವಣಾ ರ್ಯಾಲಿಯಲ್ಲಿ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ರ್ಯಾಲಿಯಲ್ಲಿ ಕುಸಿದು ಬಿದ್ದಿದ್ದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ಜಯಪ್ರದ ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶದ ರಾಂಪುದಲ್ಲಿ ಮಾತನಾಡಿದ ಜಯಪ್ರದ ಅವರು, ಅಜಂಖಾನ್ ಕುಸಿದು ಬೀಳಲು ಹೆಣ್ಣು ಮಕ್ಕಳ ಕಣ್ಣೀರಿನ ಶಾಪವೇ ಕಾರಣ, ಪ್ರತಿಯೊಂದು ಸಾರ್ವಜನಿಕ ಸಭೆಗಳಲ್ಲಿ ಅವರು ಅಳುತ್ತಿದ್ದಾರೆ, ನಾನು ತುಂಬಾ ಚೆನ್ನಾಗಿ ನಟಿಸುತ್ತೇನೆ ಎಂದು ಹೇಳುತ್ತಿದ್ದರು, ಆದರೆ ಅವರು ಈಗ ಮಾಡುತ್ತಿರುವುದು ಏನು ಎಂದು ಜಯಪ್ರದಾ ಪ್ರಶ್ನಿಸಿದ್ದಾರೆ.
ಈ ಹಿಂದೆ ಜಯಪ್ರದ ಸಮಾಜವಾದಿ ಪಕ್ಷದ ಸಂಸದೆಯಾಗಿದ್ದರು, ಆದರೆ 2010 ರಲ್ಲಿ ಅಮರ್ ಸಿಂಗ್ ಜೊತೆ ಜಯಪ್ರದಾ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು, ಜಯಪ್ರದಾ ಅವರನ್ನು ಪಕ್ಷದಿಂದ ಉಚ್ಚಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಮಾಜವಾದಿ ಪಕ್ಷದ ನಾಯಕನಾಗಿರುವ ಅಜಂಖಾನ್ ವಿರುದ್ಧ ಈಗಾಗಲೇ ಸುಮಾರು 80 ಕೇಸುಗಳು ದಾಖಲಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


