ದೇಶ

ಗಟ್ಟಿ ಗುಂಡಿಗೆಯವರಿಗೆ ಮಾತ್ರ: ದೆಹಲಿಯಲ್ಲಿ ಕೇಸರಿ ಸಿಂಹದ ಮುಂದೆ ಕುಳಿತು ಕೆರಳಿಸಿದ ಯುವಕ, ಭಯಾನಕ ವಿಡಿಯೋ!

ಯುವಕನೊರ್ವ ಝೂನಲ್ಲಿದ್ದ ಕೇಸರಿ ಸಿಂಹವಿದ್ದ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದು ಅಲ್ಲದೆ ಸಿಂಹದ ಮುಂದೆ ಕುಳಿತು ಪೋಸ್ ಕೊಟ್ಟಿರುವ ವಿಡಿಯೋ ಭಯಾನಕವಾಗಿದೆ.ನ್ಯಾಷನಲ್ ಝೂಅಲಾಜಿಕಲ್ ಪಾರ್ಕ್

ಗಟ್ಟಿ ಗುಂಡಿಗೆಯವರಿಗೆ ಮಾತ್ರ: ದೆಹಲಿಯಲ್ಲಿ ಕೇಸರಿ ಸಿಂಹದ ಮುಂದೆ ಕುಳಿತು ಕೆರಳಿಸಿದ ಯುವಕ, ಭಯಾನಕ ವಿಡಿಯೋ!
ಸಿಂಹ ದಾಳಿ
Published On :

ನವದೆಹಲಿ: ಯುವಕನೊರ್ವ ಝೂನಲ್ಲಿದ್ದ ಕೇಸರಿ ಸಿಂಹವಿದ್ದ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದು ಅಲ್ಲದೆ ಸಿಂಹದ ಮುಂದೆ ಕುಳಿತು ಪೋಸ್ ಕೊಟ್ಟಿರುವ ವಿಡಿಯೋ ಭಯಾನಕವಾಗಿದೆ. 

ಇಂದು ಬೆಳಗ್ಗೆ 12.30ರ ಸುಮಾರಿಗೆ ದೆಹಲಿಯ ನ್ಯಾಷನಲ್ ಝೂಅಲಾಜಿಕಲ್ ಪಾರ್ಕ್ಗೆ ಬಂದಿದ್ದ ಯುವಕನೋರ್ವ ಸಿಂಹಗಳಿಂದ ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾನೆ. ನಂತರ ಕೆಳಗೆ ಬಿದ್ದಿದ್ದ ಮರದ ದಿಮ್ಮಿ ಮೇಲೆ ಕುಳಿತುಕೊಂಡಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ಕೇಸರ ಸಿಂಹ ಯುವಕನನ್ನು ಮುಸಿ ನೋಡಿದೆ. ಕೆಲ ಸೆಕೆಂಡ್ ಗಳ ಕಾಲ ಸುಮ್ಮನಿದ್ದ ಸಿಂಹ ಏಕಾಏಕಿ ಆತನ ಮೇಲೆ ದಾಳಿಗೆ ಮುಂದಾಗುತ್ತದೆ. ಅಷ್ಟಕ್ಕೆ ವಿಡಿಯೋ ಕಟ್ ಆಗಿದೆ.

ಮೃಗಾಲಯಕ್ಕೆ ತೆರಳಿದ್ದ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ ನಲ್ಲಿ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. 56 ನಿಮಿಷಗಳ ಈ ವಿಡಿಯೋ ಇದೀಗ ವೈರಲ್ ಆಗಿದೆ. 

ಇನ್ನು ಝೂ ಸಿಬ್ಬಂದಿಗಳ ಮಾಹಿತಿ ಪ್ರಕಾರ. ಯುವಕ ರೆಹಾನ್ ಖಾನ್ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಯುವಕ ಮಾನಸಿಕ ಅಸ್ವಸ್ಥ ಎಂಬಂತೆ ವರ್ತಿಸಿದ್ದಾನೆ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.