ದಾವೂದ್ ಬಂಟನ ಜತೆ ಭೂ ನಂಟು: ಪ್ರಫುಲ್ ಪಟೇಲ್ ಗೆ ಇಡಿ ಸಮನ್ಸ್
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಇಕ್ಬಾಲ್ ಮಿರ್ಚಿ ಜತೆ ಅಕ್ರಮ ಭೂ ವಹಿವಾಟು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಹಾಗೂ ಎನ್ ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಸಮನ್ಸ್ ಜಾರಿ ಮಾಡಿದೆ.

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ ಇಕ್ಬಾಲ್ ಮಿರ್ಚಿ ಜತೆ ಅಕ್ರಮ ಭೂ ವಹಿವಾಟು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ಹಾಗೂ ಎನ್ ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ಅಕ್ಟೋಬರ್ 18ರಂದು ಮುಂಬೈ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪ್ರಫುಲ್ ಪಟೇಲ್ ಅವರಿಗೆ ಸಮನ್ಸ್ ನೀಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಫುಲ್ ಪಟೇಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಭೂಗತ ಜಗತ್ತು-ರಾಜಕೀಯದ ಪ್ರಕರಣ ಸದ್ದು ಮಾಡಿದ್ದು, ಎನ್‌ಸಿಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಪ್ರಫುಲ್ ಪಟೇಲ್ ಕುಟುಂಬದ ಮಾಲೀಕತ್ವದ ಮಿಲೇನಿಯಂ ಡೆವಲಪರ್ಸ್ ಮತ್ತು ಹತ ಇಕ್ಬಾಲ್ ಮಿರ್ಚಿ ನಡುವೆ ಈ ಹಿಂದೆ ನಡೆದ ಭೂಮಿ ಖರೀದಿ ವಹಿವಾಟಿನಲ್ಲಿಅಕ್ರಮ ನಡೆದಿದೆ ಎನ್ನಲಾಗಿದೆ. ಮುಂಬೈನ ಅತಿ ದುಬಾರಿ ಪ್ರದೇಶ ಎನಿಸಿರುವ ವರ್ಲಿಯ ನೆಹರೂ ತಾರಾಲಯದ ಮುಂಭಾಗ ಇಕ್ಬಾಲ್ ಪತ್ನಿ ಹಜಾರಾ ಮೆಮೊನ್‌ಗೆ ಸೇರಿರುವ ನಿವೇಶನವನ್ನು ಮಿಲೇನಿಯಂ ಡೆವಲಪರ್ಸ್ ಕಂಪನಿಗೆ ಹಸ್ತಾಂತರಿಸಲಾಗಿತ್ತು. ಹೀಗೆ ಹಸ್ತಾಂತರಗೊಂಡ ನಿವೇಶನದಲ್ಲಿಕಂಪನಿಯು 15 ಅಂತಸ್ತುಗಳ ವಾಣಿಜ್ಯ ಮತ್ತು ಗೃಹ ಬಳಕೆಯ 'ಸೀಜೆ ಹೌಸ್' ಹೆಸರಿನ ಕಟ್ಟಡವನ್ನು 2006-07ನೇ ಸಾಲಿನಲ್ಲಿನಿರ್ಮಿಸಿದೆ.
2007ರಲ್ಲಿ ಮಿಲೇನಿಯಂ ಡೆವಲಪರ್ಸ್ ಕಂಪನಿಯು ಈ ಕಟ್ಟಡದಲ್ಲಿನ ಸರಿಸುಮಾರು 200 ಕೋಟಿ ರೂ. ಮಾರುಕಟ್ಟೆ ಮೌಲ್ಯದ 14,000 ಚದರ ಅಡಿಯ ಎರಡು ಫ್ಲ್ಯಾಟ್‌ಗಳನ್ನು ಇಕ್ಬಾಲ್ ಮೆಮೊನ್ ಕುಟುಂಬಕ್ಕೆ ನೀಡಿತ್ತು. ಈ ಕೊಡುಕೊಳ್ಳುವಿಕೆಯಲ್ಲಿ ಭಾರಿ ಅಕ್ರಮಗಳು ನಡೆದಿವೆ ಎಂಬ ಆಪಾದನೆಗಳು ಕೇಳಿಬಂದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


