ವಾಯುಸೇನಾ ದಿನ: ಮಿಗ್-21ನಲ್ಲಿ ಸಾಹಸ ಪ್ರದರ್ಶಿಸಿದ ವಿಂಗ್ ಕಮಾಂಡರ್ ಅಭಿನಂದನ್
ಫೆಬ್ರವರಿಯಲ್ಲಿ ನಡೆದಿದ್ದ ಬಾಲಕೋಟ್ ದಾಳಿ ವೇಳೆ ಪಾಕಿಸ್ತಾನದ ಎಫ್ -16 ಅನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಹಾಗೂ ಅವರ ತಂಡ ಮಂಗಳವಾರ ಹಿಂಡನ್ ವಾಯುನೆಲೆಯಲ್ಲಿ ನಡೆದ ವಾಯುಪಡೆಯ ದಿನದ ಮೆರವಣಿಗೆಯಲ್ಲಿ....

ಫೆಬ್ರವರಿಯಲ್ಲಿ ನಡೆದಿದ್ದ ಬಾಲಕೋಟ್ ದಾಳಿ ವೇಳೆ ಪಾಕಿಸ್ತಾನದ ಎಫ್ -16 ಅನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಹಾಗೂ ಅವರ ತಂಡ ಮಂಗಳವಾರ ಹಿಂಡನ್ ವಾಯುನೆಲೆಯಲ್ಲಿ ನಡೆದ ವಾಯುಪಡೆಯ ದಿನದ ಮೆರವಣಿಗೆಯಲ್ಲಿ ಮಿಗ್ -21 ಬಿಸಾನ್ ವಿಮಾನವನ್ನು ಚಲಾಯಿಸಿದ್ದಾರೆ. 'ಎವೆಂಜರ್ ಫಾರ್ಮೇಷನ್ ನಲ್ಲಿ ಮೂರು ಮಿರಾಜ್ 2000 ವಿಮಾನಗಳು ಮತ್ತು ಎರಡು ಎಸ್ ಯು -30 ಎಂಕೆಐ ಯುದ್ಧ ವಿಮಾನಗಳು ಹಾರಾಟ ನಡೆಸಿವೆ.
ಬಾಲಕೋಟ್ ವೈಮಾನಿಕ ದಾಳಿಯಲ್ಲಿ ಭಾಗವಹಿಸಿದ ಪೈಲಟ್‌ಗಳು ವಿಮಾನಗಳನ್ನು ಚಲಾಯಿಸುತ್ತಿದ್ದಾರೆ. ಫೆ.26, 27ರ ದಾಳಿ ಹಾಗೂ ಬಾಲಕೋಟ್ ಘಟನೆಯಲ್ಲಿ ಪಾಲ್ಗೊಂಡ ಪೈಲಟ್ ಗಳನ್ನು ಗೌರವಿಸುವ ಸಲುವಾಗಿ ವಾಯುದಾಳಿಯಲ್ಲಿ ಭಾಗವಹಿಸಿದ ಏರ್ ಫೈಟರ್ ಪೈಲಟ್‌ಗಳನ್ನು ಮೆರವಣಿಗೆಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಭಾರತೀಯ ವಾಯುಪಡೆಯು ತನ್ನ 87ನೇ ವಾರ್ಷಿಕ ದಿನಾಚರಣೆಯನ್ನು ಮಂಗಳವಾರ (ಇಂದು) ಆಚರಿಸಿಕೊಳ್ಳುತ್ತಿದೆ.ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ಈ ಕುರಿತ ಮುಖ್ಯ ಕಾರ್ಯಕ್ರಮ ಆಯೋಜನೆಯಾಗಿದೆ.ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಐಎಎಫ್ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಉಪಸ್ಥಿತರಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


