ಜಮ್ಮು-ಕಾಶ್ಮೀರ: ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಬೆಳಕು ಕಂಡ ಕುಗ್ರಾಮ!
ಸೌಭಾಗ್ಯ ವಿದ್ಯುದೀಕರಣ ಯೋಜನೆಯಡಿ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಕುಗ್ರಾಮವೊಂದು ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ವಿದ್ಯುತ್ ಸೌಕರ್ಯ ಪಡೆದುಕೊಂಡಿದೆ.

ರಜೌರಿ: ಸೌಭಾಗ್ಯ ವಿದ್ಯುದೀಕರಣ ಯೋಜನೆಯಡಿ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಕುಗ್ರಾಮವೊಂದು ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ವಿದ್ಯುತ್ ಸೌಕರ್ಯ ಪಡೆದುಕೊಂಡಿದೆ.
ಈ ಗ್ರಾಮದ 20 ಸಾವಿರ ಮನೆಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸಲಾಗಿದೆ.ವಿಶೇಷವೆಂದರೆ ಗಡಿ ಹತ್ತಿರ ಇರುವ ಈ ಗ್ರಾಮ ಸ್ವಾತಂತ್ರ್ಯ ನಂತರವೂ ಬೆಳಕನ್ನೆ ಕಂಡಿರಲಿಲ್ಲ.
ಕೇಂದ್ರ ಸರ್ಕಾರ ಸೌಭ್ಯಾಗ್ಯ ಯೋಜನೆಯಡಿ 20 ಸಾವಿರದ 300 ಮನೆಗಳಿಗೆ ವಿದ್ಯುತ್ ಸೌಕರ್ಯ ಕಲ್ಪಿಸಿದೆ ಎಂದು ರಜೌರಿ ಡಿಡಿಸಿ ಮೊಹಮ್ಮದ್ ಐಜಾಜ್ ಅಸಾದ್ ಹೇಳಿದ್ದಾರೆ.
ಎಲ್ ಒಸಿ ಸಮೀಪವಿರುವ ಅನೇಕ ಗ್ರಾಮಗಳಲ್ಲಿ 1947ರಿಂದಲೂ ವಿದ್ಯುತ್ ಸೌಲಭ್ಯ ಇಲ್ಲದಂತಾಗಿತ್ತು. ಈಗ ವಿದ್ಯುತ್ ಸೌಕರ್ಯ ದೊರೆತಿರುವುದರಿಂದ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನೂಕಲಕರವಾಗಿದೆ. ಈ ಹಿಂದೆ ವಿದ್ಯುತ್ ಇಲ್ಲದೆ ಕ್ಯಾಂಡಲ್ ಹಾಗೂ ಸೀಮೆಎಣ್ಣೆಯ ದೀಪದ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡಬೇಕಾಗಿತ್ತು ಎಂದು ಖಂಡರಿಯಾದ ಗ್ರಾಮಸ್ಥ ಖದಿಮ್ ಹುಸೈನ್ ಸಂತಸ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಸೌಕರ್ಯದಿಂದ ವ್ಯಾಪಾರ ಚಟುವಟಿಕೆ ಬೆಳವಣಿಗೆಯಾಗಲಿದೆ. ಹೊಸ ಅಂಗಡಿಗಳನ್ನು ತೆರೆಯಬಹುದಾಗಿದೆ. ಈ ಪ್ರದೇಶದಲ್ಲಿ ಎರಡ್ಮೂರು ವಿದ್ಯುತ್ ಕಂಬಗಳನ್ನು ಹಾಕಲಾಗಿದ್ದು, ಮನೆಯಲ್ಲಿಯೇ ಮೊಬೈಲ್ ಪೋನ್ ಗಳ ಚಾರ್ಜಿಂಗ್ ಮಾಡಿಕೊಳ್ಳಲು ಅನುಕೂಲವಾಗಿದೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಹೇಳುವುದಾಗಿ ಅವರು ಹೇಳಿದ್ದಾರೆ.
ಸೆಪ್ಟೆಂಬರ್ 25, 2017ರಂದು ಸೌಭಾಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಯೋಜನೆಯಡಿ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯ ನೀಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


