ಖ್ಯಾತ ಬಾಲಿವುಡ್ ನಟಿ ಭಾಗ್ಯಶ್ರೀ ಪೋಷಕರಿಗೆ ಸ್ವಿಸ್ ಬ್ಯಾಂಕ್ ನೋಟಿಸ್
ಮೈನೇ ಪ್ಯಾರ್ ಕಿಯಾ ಚಿತ್ರದ ಮೂಲಕ ಖ್ಯಾತರಾದ ಬಾಲಿವುಡ್ ನಟಿ ಭಾಗ್ಯಶ್ರೀ ಅವರ ಪೋಷಕರಿಗೆ ಸ್ವಿಸ್ ಬ್ಯಾಂಕ್'ನಿಂದ ನೋಟಿಸ್ ಬಂದಿದೆ ಎಂದು ತಿಳಿದುಬಂದಿದೆ.

ನವದೆಹಲಿ: ಮೈನೇ ಪ್ಯಾರ್ ಕಿಯಾ ಚಿತ್ರದ ಮೂಲಕ ಖ್ಯಾತರಾದ ಬಾಲಿವುಡ್ ನಟಿ ಭಾಗ್ಯಶ್ರೀ ಅವರ ಪೋಷಕರಿಗೆ ಸ್ವಿಸ್ ಬ್ಯಾಂಕ್'ನಿಂದ ನೋಟಿಸ್ ಬಂದಿದೆ ಎಂದು ತಿಳಿದುಬಂದಿದೆ.
ಭಾಗ್ಯಶ್ರೀ ಫೋಷಕರಾದ ವಿಜಯ್ ಸಿಂಗ್ ಮಾಧವರಾಜ್ ಪಟವರ್ಧನ್ ಮತ್ತು ರೋಹಿಣಿ ವಿಜಯ್ ಸಿಂಗ್ ಅವರ ಕುರಿತ ಆಡಳಿತಾತ್ಮಕ ಮಾಹಿತಿ ನೀಡುವಂತೆ ಭಾರತ ಮಾಡಿದ್ದ ಮನವಿಯನ್ನು ಸ್ವಿಜರ್ಲೆಂಡ್'ನ ತೆರಿಗೆ ಇಲಾಖೆ ಮಾನ್ಯ ಮಾಡಿದ್ದು, ಭಾಗ್ಯಶ್ರೀ ಪೋಷಕರಿಗೆ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ನಲ್ಲಿ ಪ್ರಕರಣ ನಿರ್ವಹಣೆಗಾಗಿ ನಿಮ್ಮ ಪರ ನಾಮಿನಿಗಳನ್ನು ನೇಮಕ ಮಾಡಿ ಮತ್ತು ಭಾರತಕ್ಕೆ ಮಾಹಿತಿ ನೀಡುವುದರಿಂದ ಉದ್ಭವಿಸಬಹುದಾದ ವಿಷಯಗಳ ಬಗ್ಗೆ ನಿಮ್ಮ ಆಕ್ಷೇಪಗಳನ್ನು ನೋಟಿಸ್ ಪಡೆದ 10 ದಿನಗಳಲ್ಲಿ ಸಲ್ಲಿಸಿ ಎಂದು ನ.19ರಂದೇ ಸ್ವಿಸ್ ತೆರಿಗೆ ಇಲಾಖೆ ಸೂಚಿಸಿದೆ.
ಬ್ಯಾಂಕ್ ಖಾತೆದಾರರ ಯಾವುದೇ ಮಾಹಿತಿಯನ್ನು ಮತ್ತೊಂದು ದೇಶದ ಜೊತೆ ಹಂಚಿಕೊಳ್ಳುವ ಮೊದಲ ಪ್ರಕ್ರಿಯೆ ಇದಾಗಿರುವ ಕಾರಣ, ಶೀಘ್ರವೇ ನಟಿ ಭಾಗ್ಯ ಶ್ರೀ ಅವರ ಪೋಷಕರ ಸ್ವಿಸ್ ಬ್ಯಾಂಕ್ ಖಾತೆ ರಹಸ್ಯ ಭಾರತದ ಕೈಸೇರುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಅಕ್ರಮ ಹಣವನ್ನು ಇಟ್ಟ ಬಗ್ಗೆ ಮೇಲ್ನೋಟಕ್ಕೆ ಸಾಬೀತಾಗುವ ಪ್ರಕರಣಗಳಲ್ಲಿ ಮಾತ್ರವೇ ಇಂತಹ ನೋಟಿಸ್ ನೀಡುವ ಕಾರಣ ಭಾಗ್ಯ ಶ್ರೀ ಪೋಷಕರಿಗೆ ಮುಂದಿನ ದಿನಗಳಲ್ಲಿ ತೆರಿಕೆ ಇಲಾಖೆ ತನಿಖೆ ಬಿಸಿ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಭಾಗ್ಯಶ್ರೀ ಅವರ ತಂದೆ ವಿಜಯ್ ಸಿಂಗ್ ಪಟವರ್ಧನ್, ಮಹಾರಾಷ್ಟ್ರದ ಸಾಂಗ್ಲಿ ರಾಜಮನೆತನದ ಕೊನೆಯ ದೊರೆ. 1965ರಲ್ಲಿ ತಮ್ಮ ಅಜ್ಜನ ಸಾವಿನ ಬಳಿಕ ವಿಜಯ್ ಸಿಂಗ್ ರಾಜನಾಗಿ ಅಧಿಕಾರ ನಡೆಸಿದ್ದರು. ಆದರೆ, ಬಳಿಕ ಉದ್ಯಮದೆಡೆಗೆ ಆಸಕ್ತಿ ಬೆಳೆಸಿಕೊಂಡಿದ್ದ ವಿಜಯ್ ಸಿಂಗ್, ಕೆಲ ಕಾಲ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದರು. ಬಳಿಕ ಸಾಂಗ್ಲಿಯಲ್ಲಿ ಹಲವು ಶಿಕ್ಷಣ, ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ವಿಜಯ್ ಸಿಂಗ್ ಮತ್ತು ರೋಹಿಣಿ ಅವರ ಪುತ್ರಿ ಭಾಗ್ಯಶ್ರೀ, 1989ರಲ್ಲಿ ಬಿಡುಗಡೆಯಾದ ಮೈ ನೇ ಪ್ಯಾರ್ ಕಿಯಾ ಚಿತ್ರದ ಮೂಲಕ ದಿನ ಬೆಳಗಾಗುವುದರೊಳಗೆ ದೇಶದದ್ಯಾಂತ ಖ್ಯಾತಿ ಪಡೆದುಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


