ಅಗತ್ಯಬಿದ್ದರೆ ಮಾತ್ರ ರಜನಿಕಾಂತ್ ಜೊತೆ ಕೈಜೋಡಿಸುತ್ತೇನೆ: ಕಮಲ್ ಹಾಸನ್
ಅಗತ್ಯಬಿದ್ದರೆ ಮಾತ್ರ ರಾಜಕೀಯದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಕೈ ಜೋಡಿಸುವುದಾಗಿ ಮಕ್ಕಳ್ ನೀಧಿ ಮಯ್ಯಂ ಸಂಸ್ಥಾಪಕ, ನಟ ನಮಲ್ ಹಾಸನ್ ಅವರು ಹೇಳಿದ್ದಾರೆ.

ಚೆನ್ನೈ: ಅಗತ್ಯಬಿದ್ದರೆ ಮಾತ್ರ ರಾಜಕೀಯದಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಕೈ ಜೋಡಿಸುವುದಾಗಿ ಮಕ್ಕಳ್ ನೀಧಿ ಮಯ್ಯಂ ಸಂಸ್ಥಾಪಕ, ನಟ ನಮಲ್ ಹಾಸನ್ ಅವರು ಹೇಳಿದ್ದಾರೆ.
ಕಾಲಿವುಡ್ ಸ್ಟಾರ್ ನಟರಾದ ಕಮಲ್ ಹಾಸನ್ ಮತ್ತು ರಜನಿಕಾಂತ್ ಇಬ್ಬರೂ ತಮಿಳುನಾಡಿನ ಜನರ ಕಲ್ಯಾಣಕ್ಕಾಗಿ ತಾವು ಕೈ ಜೋಡಿಸಲು ಸಿದ್ಧ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಂತಸ ಮೂಡಿಸಿದ್ದಾರೆ.
ನನ್ನ ಸ್ನೇಹಿತ ರಜನಿಕಾಂತ್ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಕಳೆದ 44 ವರ್ಷಗಳಿಂದಲೂ ಚಿತ್ರರಂಗದಲ್ಲಿ ಜೊತೆಯಲ್ಲಿದ್ದೇವೆ. ನಾವು ರಾಜಕೀಯದಲ್ಲೂ ಒಂದಾದರೆ ಅದರಲ್ಲಿ ಆಶ್ಚರ್ಯ ಪಡುವ ವಿಷಯವೇನೂ ಇಲ್ಲ. ಒಂದು ವೇಳೆ ಅಗತ್ಯಬಿದ್ದರೆ ತಮಿಳುನಾಡಿನ ಅಭಿವೃದ್ದಿಗಾಗಿ ನಾವಿಬ್ಬರೂ ಒಂದಾಗುತ್ತೇವೆ ಎಂದು ಕಮಲ್ ಹಾಸನ್ ಅವರು ಹೇಳಿದ್ದಾರೆ.
ಇನ್ನು ಕಮಲ್ ಹಾಸನ್ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಸೂಪರ್ಸ್ಟಾರ್ ರಜನಿಕಾಂತ್, ಸಂದರ್ಭ ಕೂಡಿಬಂದರೆ ರಾಜಕಾರಣದಲ್ಲಿ ಕಮಲ್ ಹಾಸನ್ ಜೊತೆ ಸೇರಲು ನಾನೂ ಸಿದ್ಧನಿದ್ದೇನೆ. ಇಬ್ಬರ ನಡುವೆಯೂ ಉತ್ತಮ ಬಾಂಧವ್ಯವಿದೆ. ಆ ಬಾಂಧವ್ಯ ರಾಜಕಾರಣದಲ್ಲೂ ಮುಂದುವರೆಯಲಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


