13 ವರ್ಷಗಳ ನಂತರ ಸುಪ್ರೀಂ ಕೊಲಿಜಿಯಂಗೆ ಮಹಿಳಾ ನ್ಯಾಯಮೂರ್ತಿ ನೇಮಕ
ನ್ಯಾ. ಆರ್.ಭಾನುಮತಿ ಅವರು ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ನೇಮಕಗೊಂಡಿದ್ದು 13 ವರ್ಷ ನಂತರ ಮಹಿಳಾ ನ್ಯಾಯಮೂರ್ತಿಯೊಬ್ಬರು ಕೊಲಿಜಿಯಂನಲ್ಲಿ ಸ್ಥಾನ ಪಡೆದಿದ್ದಾರೆ. ಹಿರಿತನದ ಆಧಾರದ ಮೇಲೆ ಕೊಲಿಜಿಯಂಗೆ ನೇಮಕ ಮಾಡಲಾಗುತ್ತದೆ.

ನವದೆಹಲಿ: ನ್ಯಾ. ಆರ್.ಭಾನುಮತಿ ಅವರು ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ನೇಮಕಗೊಂಡಿದ್ದು 13 ವರ್ಷ ನಂತರ ಮಹಿಳಾ ನ್ಯಾಯಮೂರ್ತಿಯೊಬ್ಬರು ಕೊಲಿಜಿಯಂನಲ್ಲಿ ಸ್ಥಾನ ಪಡೆದಿದ್ದಾರೆ. ಹಿರಿತನದ ಆಧಾರದ ಮೇಲೆ ಕೊಲಿಜಿಯಂಗೆ ನೇಮಕ ಮಾಡಲಾಗುತ್ತದೆ.
ಹಾಲಿ ನ್ಯಾಯಮೂರ್ತಿಗಳ ಪೈಕಿ ಹಿರಿತನದಲ್ಲಿ 5ನೇಯವರಾಗಿರುವ ನ್ಯಾ.ಭಾನುಮತಿ ಅವರು ಸಿಜೆಐ ಗೊಗೊಯ್ ಅವರ ನಿವೃತ್ತಿ ನಂತರ ಕೊಲಿಜಿಯಂಗೆ ನೇಮಕಗೊಂಡಿದ್ದಾರೆ. ಅವರ ಸೇವಾವಧಿ 2020ರ ಜುಲೈ 19ರವರೆಗೆ ಇದೆ. ಸಿಜೆಐ ಎಸ್. ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎನ್. ವಿ ರಮಣ, ಅರುಣ್ ಮಿಶ್ರಾ, ಆರ್.ಎಫ್. ನಾರಿಮನ್ ಮತ್ತು ಆರ್. ಭಾನುಮತಿ ಅವರು ಹಾಲಿ ಕೊಲಿಜಿಯಂ ಸದಸ್ಯರು.
♦️ನೇರ ನೇಮಕದಲ್ಲಿ ಆಯ್ಕೆ:
ತಮಿಳುನಾಡು ಮೂಲದ ನ್ಯಾ.ಭಾನುಮತಿ ಅವರು ತಿರುಪತ್ತೂರು, ಕೃಷ್ಣಗಿರಿ ಕೋರ್ಟ್‌ಗಳಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. 1988ರಲ್ಲಿನೇರ ನೇಮಕಾತಿ ಮೂಲಕ ಜಿಲ್ಲಾನ್ಯಾಯಾಧೀಶರಾಗಿ ನೇಮಕಗೊಂಡು ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿಸೇವೆ ಸಲ್ಲಿಸಿದ್ದಾರೆ. 2003ರ ಏ. 3ರಂದು ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದ ಅವರು, 2013ರ ನ.16ರಂದು ಜಾರ್ಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು
2014ರ ಆ.13ರಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದಾರೆ. ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ನೀಡಿದ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳಲ್ಲಿನ್ಯಾ. ಭಾನುಮತಿ ಕೂಡ ಒಬ್ಬರು.
ಮಧ್ಯಪ್ರದೇಶ ಹೈಕೋರ್ಟ್‌ನ ಜಡ್ಜ್ ಎಸ್.ಕೆ. ಗಂಗಲೆ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಲು ಅಂದಿನ ರಾಜ್ಯಸಭೆ ಸಭಾಪತಿ ಹಮೀದ್ ಅನ್ಸಾರಿ ರಚಿಸಿದ ವಿಚಾರಣಾ ಸಮಿತಿ ಮುಂದಾಳತ್ವವನ್ನು ಭಾನುಮತಿ ವಹಿಸಿದ್ದರು.
ಸಮಿತಿಯು ಗಂಗಲೆ ಅವರಿಗೆ ಕ್ಲೀನ್‌ಚಿಟ್ ನೀಡಿದೆ. ಕೊಲೆಜಿಯಂನ ಕೊನೆಯ ಮಹಿಳಾ ನ್ಯಾಯಮೂರ್ತಿಯಾಗಿದ್ದವರು ನ್ಯಾ. ರುಮಾ ಪಾಲ್. ಅವರು ಜೂ 2, 2006 ರಂದು ನಿವೃತ್ತರಾದ 14 ವರ್ಷಗಳ ನಂತರ ನ್ಯಾ. ಭಾನುಮತಿ ಕೊಲಿಜಿಯಂನಲ್ಲಿ ಸ್ಥಾನ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


