ಅಕ್ರಮ ಪ್ರವೇಶ: ಇಬ್ಬರು ಭಾರತೀಯರನ್ನು ಬಂಧಿಸಿದ ಪಾಕಿಸ್ತಾನ ಪೊಲೀಸರು
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಲ್ಪುರ್ ಜಿಲ್ಲೆಯ ಕೊಲಿಸ್ತಾನ್ ಮರುಭೂಮಿಯ ಗಡಿ ಮೂಲಕ ಪಾಕಿಸ್ತಾನವನ್ನು ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ಭಾರತೀಯರನ್ನು ಬಂಧಿಸಲಾಗಿದೆ.

ಹೈದರಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಲ್ಪುರ್ ಜಿಲ್ಲೆಯ ಕೊಲಿಸ್ತಾನ್ ಮರುಭೂಮಿಯ ಗಡಿ ಮೂಲಕ ಪಾಕಿಸ್ತಾನವನ್ನು ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ಭಾರತೀಯರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಒಬ್ಬರು ತೆಲಂಗಾಣ ಮೂಲದ ವಿ ಬಾಬುರಾವ್ ಅವರ ಪುತ್ರ ಸಾಫ್ಟ್ ವೇರ್ ಎಂಜಿನಿಯರ್ ಪ್ರಶಾಂತ್ ವೈಂದಮ್ ಮತ್ತು ಮಧ್ಯ ಪ್ರದೇಶದ ಸುಬಿ ಲಾಲ್ ಪುತ್ರ ದುರ್ಮಿ ಲಾಲ್ ಎಂದು ಗುರುತಿಸಲಾಗಿದೆ.
ಪಾಕಿಸ್ತಾನ ಪೊಲೀಸರು ಇವರಿಬ್ಬರ ಮೇಲೆ ಎಫ್ಐಆರ್ ದಾಖಲಿಸಿದ್ದು ಪಾಕಿಸ್ತಾನ ಮಾಧ್ಯಮಗಳಿಗೆ ಎಫ್ಐಆರ್ ಪ್ರತಿ ಸಿಕ್ಕಿದೆ. ಕಳೆದ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಇವರು ಬಂಧಿತರಾಗಿದ್ದಾರೆ.
ಕೊಲಿಸ್ತಾನ್ ಗಡಿಯಲ್ಲಿ ಇಬ್ಬರು ವಿದೇಶಿಯರು ತಿರುಗಾಡುತ್ತಿದ್ದಾರೆ ಎಂದು ಮಾಹಿತಿ ಪಡೆದ ಪಾಕಿಸ್ತಾನ ಪೊಲೀಸರು ಅಲ್ಲಿಗೆ ಧಾವಿಸಿ ಅಲ್ಲಿ ಮರಳಿನ ದಿಬ್ಬದ ಹಿಂದೆ ಅವಿತು ಕುಳಿತಿದ್ದ ಈ ಭಾರತೀಯ ಯುವಕರನ್ನು ಬಂಧಿಸಿದ್ದಾರೆ.
ಪೊಲೀಸರು ಅವರ ಬಳಿ ಗುರುತು ಪತ್ರ ಮತ್ತು ಪಾಸ್ ಪೋರ್ಟ್ ಕೇಳಿದಾಗ ಅವರಲ್ಲಿ ಯಾವುದೂ ಇರಲಿಲ್ಲ ಎಂದು ತಿಳಿದುಬಂದಿದೆ.
ನಿನ್ನೆ ಬಿಡುಗಡೆಯಾದ ವಿಡಿಯೊದಲ್ಲಿ ಪ್ರಶಾಂತ್ ತನ್ನ ಪೋಷಕರನ್ನು ಉದ್ದೇಶಿಸಿ ತನ್ನನ್ನು ಜೈಲಿಗೆ ಕಳುಹಿಸಲಾಗಿದ್ದು ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡಬಹುದು ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


