ಅಶೋಕ್ ಸಿಂಘಾಲ್ ಗೆ ಭವ್ಯ ಸ್ಮಾರಕ ನಿರ್ಮಿಸಲಿರುವ ವಿಶ್ವ ಹಿಂದೂ ಪರಿಷತ್
ಆಯೋಧ್ಯೆ ರಾಮ ಮಂದಿರ ಆಂದೋಲನ ನಾಯಕ ಅಶೋಕ್ ಸಿಂಘಾಲ್ ಹಾಗೂ ಹುತಾತ್ಮ ಕರಸೇವಕರ ಸ್ಮರಣೆಗಾಗಿ ಭವ್ಯ ಸ್ಮಾರಕವೊಂದನ್ನು ನಿರ್ಮಿಸಲು ವಿಶ್ವ ಹಿಂದೂ ಪರಿಷತ್-ವಿಎಚ್ ಪಿ ಯೋಚಿಸುತ್ತಿದೆ ಎಂದು ಸಂಘಟನೆಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಅಲಿಯಾಸ್ ಪಂಕಜ್ ತಿಳಿಸಿದ್ದಾರೆ.

ಸಹರಾನ್ಪುರ್: ಆಯೋಧ್ಯೆ ರಾಮ ಮಂದಿರ ಆಂದೋಲನ ನಾಯಕ ಅಶೋಕ್ ಸಿಂಘಾಲ್ ಹಾಗೂ ಹುತಾತ್ಮ ಕರಸೇವಕರ ಸ್ಮರಣೆಗಾಗಿ ಭವ್ಯ ಸ್ಮಾರಕವೊಂದನ್ನು ನಿರ್ಮಿಸಲು ವಿಶ್ವ ಹಿಂದೂ ಪರಿಷತ್-ವಿಎಚ್ ಪಿ ಯೋಚಿಸುತ್ತಿದೆ ಎಂದು ಸಂಘಟನೆಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಅಲಿಯಾಸ್ ಪಂಕಜ್ ತಿಳಿಸಿದ್ದಾರೆ.
ಅಶೋಕ್ ಸಿಂಘಾಲ್ ಅವರು, ತಮ್ಮ ಇಡೀ ಜೀವನವನ್ನು ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೆಂಬ ಆಂದೋಲನಕ್ಕೆ ಸಮರ್ಪಿಸಿಕೊಂಡಿದ್ದರು. ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಹಾದಿ ಸುಗಮಗೊಳಿಸುವ ಮೂಲಕ ಕೋಟ್ಯಾಂತರ ಹಿಂದೂಗಳ ನಂಬಿಕೆ ಹಾಗೂ ಭಾವನೆಗಳನ್ನು ಗೌರವಿಸಿದೆ ಎಂದು ಹೇಳಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಧಾನಿ ನರೇಂದ್ರ ಮೋದಿ ದೇಗುಲ ನಿರ್ಮಾಣಕ್ಕೆ ಟ್ರಸ್ಟ್ ರಚಿಸಲಿದ್ದಾರೆ. ಆಯೋಧ್ಯೆಯನ್ನು ಪ್ರವಾಸಿ ಸ್ಥಳವನ್ನಾಗಿ ಅಭಿವೃದ್ದಿ ಪಡಿಸಲು ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಸರ್ಕಾರ ಯೋಜನೆ ರೂಪಿಸಿದ್ದು, ಇದರಿಂದ ಇಡೀ ಪ್ರದೇಶ ಅಭಿವೃದ್ದಿಯಾಗಲಿದೆ ಎಂದು ಪಂಕಜ್ ಆಶಯ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


