ಬಿಜೆಪಿ ವಿಫಲವಾದರೆ ಸರ್ಕಾರ ರಚಿಸಲು ಶಿವಸೇನೆ ಹಕ್ಕು ಮಂಡಿಸಲಿದೆ: ಸಂಜಯ್ ರಾವತ್
ಬಿಜೆಪಿ ವಿಫಲಗೊಂಡಿದ್ದೇ ಆದರೆ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆ ಹಕ್ಕು ಮಂಡಿಸಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಹೇಳಿದ್ದಾರೆ.

ಮುಂಬೈ: ಬಿಜೆಪಿ ವಿಫಲಗೊಂಡಿದ್ದೇ ಆದರೆ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆ ಹಕ್ಕು ಮಂಡಿಸಲಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಹೇಳಿದ್ದಾರೆ.
ಈ ಹಿಂದೆ ಒಪ್ಪಿಕೊಂಡಂತೆ 50-50 ಅಧಿಕಾರ ಹಂಚಿಕೆಗೆ ಬಿಜೆಪಿ ಒಪ್ಪುತ್ತಿಲ್ಲ. ಸರ್ಕಾರ ರಚಿಸುವಲ್ಲಿ ಬಿಜೆಪಿ ವಿಫಲವಾಗಿದ್ದೇ ಆದರೆ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ನಾವು ಹಕ್ಕು ಮಂಡಿಸುತ್ತೇವೆಂದು ಹೇಳಿದ್ದಾರೆ.
ಸರ್ಕಾರ ರಚಿಸುವಂತೆ ರಾಜ್ಯಪಾಲರು ಬಿಜೆಪಿಯನ್ನು ಆಹ್ವಾನಿಸಿದ್ದಾರೆ. ಇದನ್ನು ನಾವು ಸ್ವಾಗತಿಸುತ್ತೇವೆ. ರಾಜ್ಯದಲ್ಲಿರುವ ಅಸ್ಥಿರತೆಗೆ ಅಂತ್ಯ ಹಾಡಬೇಕೆಂದು ಪದೇ ಪದೇ ಹೇಳುತ್ತಲೇ ಇದ್ದೇವೆ. ವಿಧಾನಸಭಾ ಚುನಾವಣೆಗೂ 15 ದಿನಗಳಿಗೂ ಮುನ್ನವೇ ಘೋಷಣೆ ಮಾಡಿದ್ದೇವೆ. ಆದರೆ, ಅದನ್ನೋ ಬಿಜೆಪಿ ಮಾಡಲೇ ಇಲ್ಲ. ಮಹಾರಾಷ್ಚ್ರದಲ್ಲಿ ಬಿಜೆಪಿ ಸರ್ಕಾರ ರಚಿಸುವಲ್ಲಿ ವಿಫಲಗೊಂಡಿದ್ದೇ ಆದರೆ, ಶಿವಸೇನೆ ಜವಾಬ್ದಾರಿ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ನಾವು ರಾಜಕೀಯ ತಂತ್ರಗಳನ್ನು ನಂಬಿಲ್ಲ. ಶಿವಸೇನೆಯ ನಿಘಂಟಿನಲ್ಲಿ ಒಪ್ಪಂದ ಎಂಬ ಪದವೇ ಇಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


