ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಕಾಮಾಂಧ ಶಿಕ್ಷಕರು!
ಒಳಿತು ಕೆಡುಕುಗಳನ್ನು ಮಕ್ಕಳಿಗೆ ತಿಳಿಸುವ ಶಿಕ್ಷಕರೇ ಮೃಗೀಯ ವರ್ತನೆ ತೋರಿದ್ದು, ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಪಾಲಂಪುರ್: ಒಳಿತು ಕೆಡುಕುಗಳನ್ನು ಮಕ್ಕಳಿಗೆ ತಿಳಿಸುವ ಶಿಕ್ಷಕರೇ ಮೃಗೀಯ ವರ್ತನೆ ತೋರಿದ್ದು, ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಗುಜರಾತ್ ನ ಪಾಲಂಪುರದಲ್ಲಿ ಇಬ್ಬರು ಅಂಧ ಶಿಕ್ಷಕರು 15 ವರ್ಷದ ಅಂಧ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಟೆಂಪಲ್ ಟೌನ್ ಎಂದೇ ಖ್ಯಾತವಾಗಿರುವ ಅಂಬಾಜಿಯಲ್ಲಿ ಖಾಸಗಿ ಟ್ರಸ್ಟ್ ನಿಂದ ನಡೆಸುತ್ತಿರುವ ಶಾಲೆಯಲ್ಲಿ ಅಂಧ ಬಾಲಕಿಯ ಮೇಲೆ ಸತತ 4 ತಿಂಗಳ ಕಾಲ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅತ್ಯಾಚಾರದ ಸಂತ್ರಸ್ತ ಬಾಲಕಿ ತನ್ನ ಸೋದರ ಸಂಬಂಧಿಗೆ ತನ್ನ ಮೇಲೆ ಶಿಕ್ಷಕರೇ ಅತ್ಯಾಚಾರವೆಸಗಿರುವ ಘಟನೆಗಳನ್ನು ತಿಳಿಸಿದ್ದಾಳೆ. ಈ ಆಧಾರದ ಮೇಲೆ ದೂರು ದಾಖಲಾಗಿದ್ದು, ಶಿಕ್ಷಕರ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿದೆ.
ದೀಪಾವಳಿ ರಜೆ ಮುಗಿದ ಬಳಿಕ ಶಾಲೆಗೆ ಹೋಗಲು ಬಾಲಕಿ ಹಿಂದೇಟು ಹಾಕುತ್ತಿದ್ದಳು. ಇದರಿಂದ ಆತಂಕಕ್ಕೊಳಗಾದ ಪೋಷಕರು ಕಾರಣವನ್ನು ವಿಚಾರಿಸಿದ್ದಾರೆ. ಕಣ್ಣೀರಿಟ್ಟ ಬಾಲಕಿ ತನ್ನ ಮೇಲೆ ಶಾಲೆಯಲ್ಲಿ ಚಮನ್ ಠಾಕೂರ್ (62) ಜಯಂತಿ ಠಾಕೂರ್ (30) ಎಂಬ ಇಬ್ಬರು ಶಿಕ್ಷಕರು ಅತ್ಯಾಚಾರ ನಡೆದಿರುವುದನ್ನು ವಿವರಿಸಿದ್ದಾಳೆ.
ತನ್ನ ಗ್ರಾಮದ ಶಾಲೆಯಲ್ಲಿ 8 ನೇ ತರಗತಿಯ ವರೆಗೂ ಕಲಿತಿದ್ದ ವಿದ್ಯಾರ್ಥಿನಿ ಅಂಬಾಜಿಯಲ್ಲಿ ಖಾಸಗಿ ಟ್ರಸ್ಟ್ ನಿಂದ ನಡೆಸುತ್ತಿರುವ ಶಾಲೆಯಲ್ಲಿ ಸಂಗೀತ ಕಲಿಯುವುದಕ್ಕೆ ಸೇರಿದ್ದಳು. ಈ ವೇಳೇ ಸಂಗೀತ ಕಲಿಸುವ ಕೋಠಡಿಯಲ್ಲಿ ಜಯಂತಿ ಠಾಕೂರ್ ಎಂಬುವವರು ಬಾಲಕಿಯ ಮೇಲೆ 2 ತಿಂಗಳ ಹಿಂದೆ ಅತ್ಯಾಚಾರವೆಸಗಿದ್ದಾರೆ. ನಂತರ ಅದೇ ಕೊಠಡಿಯಲ್ಲಿ ಚಮಾನ್ ಠಾಕೂರ್ ನಿಂದಲೂ ಅತ್ಯಾಚಾರ ನಡೆದಿದೆ.
ಈ ಬಳಿಕ ತನ್ನ ಪರಿಸ್ಥಿತಿಯನ್ನು ಇತರ ಮೂವರು ಶಿಕ್ಷಕರಿಗೆ ತಿಳಿಸಿದ ನಂತರ ತನ್ನ ಮೇಲಿನ ಲೈಂಗಿಕ ಕಿರುಕುಳ ನಿಂತಿದೆ ಎಂದು ಬಾಲಕಿ ಹೇಳಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


