ಕಾಲಾಪಾಣಿ ಪ್ರದೇಶ ವಿವಾದ: ನೇಪಾಳದ ಆಕ್ಷೇಪ ತಳ್ಳಿ ಹಾಕಿದ ಭಾರತ
ಕಾಲಾಪಾನಿ ಪ್ರದೇಶವನ್ನು ಭಾರತದ ಹೊಸ ನಕ್ಷೆಯಲ್ಲಿ ಚಿತ್ರಣ ಮೂಡಿರುವ ಬಗ್ಗೆ ನೇಪಾಳದ ಅಪಸ್ವರವನ್ನು ಪ್ರತಿಭಟನೆಯನ್ನು ಭಾರತ ತಿರಸ್ಕರಿಸಿದೆ.

ಕಠ್ಮಂಡು: ಕಾಲಾಪಾನಿ ಪ್ರದೇಶವನ್ನು ಭಾರತದ ಹೊಸ ನಕ್ಷೆಯಲ್ಲಿ ಚಿತ್ರಣ ಮೂಡಿರುವ ಬಗ್ಗೆ ನೇಪಾಳದ ಅಪಸ್ವರವನ್ನು ಪ್ರತಿಭಟನೆಯನ್ನು ಭಾರತ ತಿರಸ್ಕರಿಸಿದೆ.
ಭಾರತದ ಹೊಸ ಪೊಲಿಟಿಕಲ್ ಮ್ಯಾಪ್ ಗೆ ನೆರೆಯ ನೇಪಾಳ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಹೊಸ ಮ್ಯಾಪ್ ನಲ್ಲಿರುವ ಕಾಲಾಪಾನಿ ಪ್ರದೇಶ ನಮ್ಮದು ಎಂದು ಹೇಳಿತ್ತು.
ಕಳೆದ ಶನಿವಾರ ಕೇಂದ್ರ ಸರ್ಕಾರ ದೇಶದ ಹೊಸ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು–ಕಾಶ್ಮೀರ ಮತ್ತು ಲಡಾಖ್ ಒಳಗೊಂಡ ಹೊಸ ಮ್ಯಾಪ್ ಅನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಕಾಲಾಪಾನಿಯೂ ಭಾರತದಲ್ಲಿದೆ. ಆದರೆ ಅದು ನಮ್ಮ ಪ್ರದೇಶ. ಕಾಲಾಪಾನಿ ನೇಪಾಳ ಭೂ ಪ್ರದೇಶದ ವ್ಯಾಪ್ತಿಗೆ ಬರುತ್ತದೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ ಹೇಳಿತು.
ಮಾಧ್ಯಮಗಳ ವರದಿಯ ಪ್ರಕಾರ, ಭಾರತದ ಹೊಸ ಮ್ಯಾಪ್ ನಲ್ಲಿ ಕಾಲಾಪಾನಿಯನ್ನು ಸೇರಿಸಲಾಗಿದೆ ಎಂದು ನೇಪಾಳ ದೂರಿತು.
ವಿದೇಶಾಂಗ ಕಾರ್ಯದರ್ಶಿ ಮಟ್ಟದ ಜಂಟಿ ಸಭೆಯಲ್ಲಿ, ನೇಪಾಳ ಮತ್ತು ಭಾರತದ ನಡುವೆ ಬಾಕಿ ಇರುವ ಗಡಿ-ಸಂಬಂಧಿತ ಸಮಸ್ಯೆಗಳ ಕುರಿತು ಸಮಾಲೋಚಿಸಿ ಪರಿಹರಿಸುವ ಜವಾಬ್ದಾರಿಯನ್ನು ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ ಎಂದು ನೇಪಾಳ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


