ತಂಗಿ ಸ್ನಾನ ಮಾಡುವ ವೀಡಿಯೋವನ್ನು ಪ್ರಿಯಕರನೊಡನೆ ಹಂಚಿಕೊಂಡ ಸಹೋದರಿ!
ತಂಗಿ ಸ್ನಾನ ಮಾಡುತ್ತಿರುವಾಗ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ತನ್ನ ಪ್ರಿಯಕರನಿಗೆ ಕಳಿಸಿದ 25 ವರ್ಷದ ಯುವತಿಯನ್ನು ಮುಂಬೈ ಪೋಲೀಸರು ಬಂಧಿಸಿದ್ದಾರೆ.

ಮುಂಬೈ: ತಂಗಿ ಸ್ನಾನ ಮಾಡುತ್ತಿರುವಾಗ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ತನ್ನ ಪ್ರಿಯಕರನಿಗೆ ಕಳಿಸಿದ 25 ವರ್ಷದ ಯುವತಿಯನ್ನು ಮುಂಬೈ ಪೋಲೀಸರು ಬಂಧಿಸಿದ್ದಾರೆ.
ಬೈಕುಲ್ಲಾ ನಿವಾಸಿಯಾಗಿರುವ ತನ್ನ ಸೋದರಿ 20ರ ಹರೆಯದ ಯುವತಿಯ ಸ್ನಾನದ ದೃಶ್ಯಗಳನ್ನು ಚಿತ್ರೀಕರಿಸಿ ತನ್ನ ಪ್ರಿಯಕರನಿಗೆ ಕಳಿಸಿದ ಕಾರಣ ಸಂತ್ರಸ್ಥೆ ತನ್ನ ಅಕ್ಕನ ವಿರುದ್ಧ ಪೋಲೀಸರಿಗೆ ದೂರು ಸಲ್ಲಿಸಿದ್ದಾಳೆ. ದೂರು ಸ್ವೀಕರಿಸಿದ ಅಗ್ರಿಪಾದಾ ಪೋಲೀಸರು ಆರೋಪಿ ಯುವತಿಯನ್ನು ಬಂಧಿಸಿದ್ದಾರೆ.
ಆರೋಪಿ ಯುವತಿ ತನ್ನ ಪ್ರಿಯಕರನಿಗೆ ವಿಡಿಯೋ ಕರೆ ಮಾಡಿ ಸಹೋದರಿ ಸ್ನಾನ ಮಾಡಿದ್ದನ್ನು ತೋರಿಸಿದ್ದಾಳೆ, ಆ ವ್ಯಕ್ತಿಯು ಕರೆ ಸಮಯದಲ್ಲಿ ಸ್ಕ್ರೀನ್ಶಾಟ್ಗಳನ್ನು ತೆಗೆದುಕೊಂಡು, ತನ್ನ ಮೊಬೈಲ್ ಫೋನ್ನಲ್ಲಿ ಉಳಿಸಿ ನಂತರ ಸಂತ್ರಸ್ತೆಯ ಸಂಬಂಧಿಕರೊಂದಿಗೆ ಹಂಚಿಕೊಂಡಿದ್ದಾನೆ ಎಂದು ಪೋಲೀಸರು ಹೇಳಿದ್ದಾರೆ.
ಆತ ತನ್ನ ಗೆಳತಿಗೆ ಆಕೆಯ ಸೋದರಿಯ ಅಶ್ಲೀಲ ದೃಶ್ಯಗಳನ್ನು ಸೆರೆಹಿಡಿಯುವಂತೆ ಒತ್ತಾಯಿಸಿದ್ದ. ಇದಕ್ಕೆ ಪ್ರತಿಯಾಗಿ ತಾನು ಆಕೆಯನ್ನು ವಿವಾಹವಾಗುವುದಾಗಿ ಭರವಸೆ ನೀಡಿದ್ದ. ಇದು ಸೇಡು ತೀರಿಸಿಕೊಳ್ಳುವ ಕ್ರಮ ಎನ್ನಲಾಗಿದ್ದು ಈ ಹಿಂದೆ ನವರಾತ್ರಿ ಆಚರಣೆ ವೇಳೆ ಸಂತ್ರಸ್ಥೆಯು ತನ್ನ ಅಕ್ಕನ ಗೆಳೆಯನಾದ ಈ ವ್ಯಕ್ತಿಯನ್ನು ಅವಮಾನಿಸಿದ್ದಳು ಎಂದು ತಿಳಿದುಬಂದಿದೆ.
ಇದೀಗ ಆರೋಪಿ ಯುವತಿ ಃಆಗೂ ಆಕೆಯ ಗೆಳೆಯನ ವಿರುದ್ಧ ದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಸಿ) (ವಾಯ್ಯುರಿಸಮ್), 34 (ಕಾಮನ್ ಇಂಟೆನ್ಷನ್)ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಕಣ್ಮರೆಯಾಗಿರುವ ಆಕೆಯ ಗೆಳಯನಿಗಾಗಿ ಶೋಧಕಾರ್ಯ ನಡೆದಿದೆ ಎಂದು ಪೋಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


