ದೇಶ

ಮೋದಿ ಸರ್ಕಾರ 2.0: ಇಂದು ಸಂಜೆ ಮೊದಲ ಸಂಪುಟ ಸಭೆ, ಯಾರಿಗೆ ಯಾವ ಖಾತೆ, ನೂತನ ಸಚಿವರಿಗೆ ಸಂಭಾವ್ಯ ಖಾತೆ ವಿವರ ಇಲ್ಲಿದೆ

ಸತತ 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನರೇಂದ್ರ ಮೋದಿ ಅವರು ಇಂದು ಸಂಜೆ ಸಂಪುಟಸಭೆ ಕರೆದಿದ್ದು, ಸಚಿವರಿಗೆ ಖಾತೆ ಹಂಚಿಕೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಮೋದಿ ಸರ್ಕಾರ 2.0: ಇಂದು ಸಂಜೆ ಮೊದಲ ಸಂಪುಟ ಸಭೆ, ಯಾರಿಗೆ ಯಾವ ಖಾತೆ, ನೂತನ ಸಚಿವರಿಗೆ ಸಂಭಾವ್ಯ ಖಾತೆ ವಿವರ ಇಲ್ಲಿದೆ
ಸಂಗ್ರಹ ಚಿತ್ರ
Published On :
ನವದೆಹಲಿ: ಸತತ 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ನರೇಂದ್ರ ಮೋದಿ ಅವರು ಇಂದು ಸಂಜೆ ಸಂಪುಟಸಭೆ ಕರೆದಿದ್ದು, ಸಚಿವರಿಗೆ ಖಾತೆ ಹಂಚಿಕೆ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ನಿನ್ನೆ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಕರ್ನಾಟಕದ ನಾಲ್ಕು ಮಂದಿ ಸಂಸದರೂ ಸೇರಿದಂತೆ ಒಟ್ಟು 57 ಮಂದಿ ಸಂಸದರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮುಖವಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕರ್ನಾಟಕದ ಸಂಸದ ಪ್ರಹ್ಲಾದ್ ಜೋಷಿ ಇದೇ ಮೊದಲ ಬಾರಿಗೆ ಮೋದಿ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಇನ್ನು ಸರ್ಕಾರ ರಚನೆ ಬಳಿಕ ಇದೇ ಮೊದಲ ಬಾರಿಗೆ ಇಂದು ಸಂಜೆ ದೆಹಲಿಯಲ್ಲಿ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ನೂತನ ಸಚಿವರ ಖಾತೆ ಹಂಚಿಕೆ ಕುರಿತಂತೆ ಚರ್ಚೆ ನಡೆಯಲಿದೆ. ರಾಜನಾಥ್ ಸಿಂಗ್, ಸ್ಮೃತಿಇರಾನಿ, ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರಿಗೆ ಪ್ರಮುಖ ಖಾತೆಗಳ ನಿರ್ವಹಣೆ ನೀಡುವ ಸಾಧ್ಯತೆ ಇದ್ದು, ಇದೇ ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ವಿತ್ತ ಸಚಿವಾಲಯದ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. 
ಕಳೆದ ಬಾರಿ ಅರುಣ್ ಜೇಟ್ಲಿ ಅವರು ಈ ಇಲಾಖೆಯ ಜವಾಬ್ದಾರಿ ಹೊತ್ತಿದ್ದರು. ಆದರೆ ಈ ಬಾರಿ ಅನಾರೋಗ್ಯ ಸಮಸ್ಯೆಯಿಂದಾಗಿ ಜೇಟ್ಲಿ ಸಂಪುಟದಿಂದ ದೂರ ಉಳಿದಿದ್ದಾರೆ. ಹೀಗಾಗಿ ವಿತ್ತ ಇಲಾಖೆ ಅಮಿತ್ ಶಾ ಪಾಲಾಗುವ ಸಾಧ್ಯತೆ ಇದೆ. ಇನ್ನು ಗೃಹಖಾತೆ ಈ ಹಿಂದಿನಂತೆಯೇ ರಾಜನಾಥ್ ಸಿಂಗ್ ಅವರಿಗೇ ನೀಡುವ ಸಾಧ್ಯತೆ ಇದ್ದು, ರಕ್ಷಣಾ ಇಲಾಖೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ಮತ್ತೆ ವಹಿಸುವ ಸಾಧ್ಯತೆ ಇದೆ. 
ಇನ್ನು ಕಾಂಗ್ರೆಸ್ ಭದ್ರಕೋಟೆ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ಮಣಿಸಿದ್ದ ಸ್ಮೃತಿ ಇರಾನಿ ಅವರಿಗೆ ಈ ಬಾರಿ ಪ್ರಮುಖ ಇಲಾಖೆಯ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.
ನೂತನ ಸಚಿವರಿಗೆ ಸಂಭಾವ್ಯ ಖಾತೆ ವಿವರ
ಪ್ರಧಾನಿ ನರೇಂದ್ರ ಮೋದಿ: ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳು, ಪರಮಾಣು ಶಕ್ತಿ ಇಲಾಖೆ, ಬಾಹ್ಯಾಕಾಶ ಇಲಾಖೆ ಮತ್ತು ಇತರೆ ಹಂಚಿಕೆಯಾಗದ ಖಾತೆಗಳು
ರಾಜನಾಥ್ ಸಿಂಗ್: ಗೃಹಖಾತೆ
ಅಮಿತ್ ಶಾ: ವಿತ್ತ ಇಲಾಖೆ ಮತ್ತು ಕಾರ್ಪೊರೇಟ್ ವ್ಯವಹಾರಗಳು
ನಿತಿನ್ ಗಡ್ಕರಿ: ಸಾರಿಗೆ ಇಲಾಖೆ, ಹೆದ್ದಾರಿ ಸಚಿವಾಲಯ, ಶಿಪ್ಪಿಂಗ್, ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರ್ವಸತಿ
ಡಿವಿ ಸದಾನಂದಗೌಡ: ಅಂಕಿಅಂಶ ಮತ್ತು ಕಾರ್ಯಕ್ರಮದ ಅನುಷ್ಠಾನ ಇಲಾಖೆ
ನಿರ್ಮಲಾ ಸೀತಾರಾಮನ್: ರಕ್ಷಣಾ ಇಲಾಖೆ
ಎಸ್ ಜೈಶಂಕರ್: ವಿದೇಶಾಂಗ ಇಲಾಖೆ
ರವಿ ಶಂಕರ್ ಪ್ರಸಾದ್: ಕಾನೂನು ಮತ್ತು ನ್ಯಾಯಾಂಗ ಸಚಿವ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ರಮೇಶ್ ಪೋಖ್ರಿಯಲ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ  ಅಭಿವೃದ್ದಿ ಇಲಾಖೆ
ನರೇಂದ್ರ ಸಿಂಗ್ ತೋಮರ್: ಸಂಸದೀಯ ವ್ಯವಹಾರಗಳ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ
ತಾವರ್ ತಂದ್ ಗೆಹ್ಲೂಟ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.