ಮಗಳನ್ನು ಅಂಗನವಾಡಿಗೆ ಸೇರಿಸಿ ಮಾದರಿಯಾದ ಐಎಎಸ್ ಅಧಿಕಾರಿ: ರಾಜ್ಯಪಾಲರ ಮೆಚ್ಚುಗೆ!
ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುವವರೇ ಹೆಚ್ಚು. ತಮ್ಮ ಮಕ್ಕಳಿದೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲಿ ಅನ್ನೋದು ಎಲ್ಲಾ ಪೋಷಕರ ಬಯಕೆ, ಹೀಗಾಗಿ ಹೆಚ್ಚಿನ ...

Published On :
ಭೂಪಾಲ್: ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುವವರೇ ಹೆಚ್ಚು. ತಮ್ಮ ಮಕ್ಕಳಿದೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಲಿ ಅನ್ನೋದು ಎಲ್ಲಾ ಪೋಷಕರ ಬಯಕೆ, ಹೀಗಾಗಿ ಹೆಚ್ಚಿನ ಹಣ ತೆತ್ತು ಮಕ್ಕಳನ್ನು ಶಾಲೆಗೆ ಸೇರಿಸುತ್ತಾರೆ,
ಆದರೆ ಇಲ್ಲೊಬ್ಬರು ಐಎಎಸ್ ಅಧಿಕಾರಿ ಒಬ್ಬರು ತಮ್ಮ ಮಗಳನ್ನ ಸರ್ಕಾರಿ ಅಂಗನವಾಡಿಗೆ ಸೇರಿಸಿದ್ದಾರೆ. ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರಿಗೆ ಮಾದರಿಯಾಗಿದ್ದಾರೆ.
ಮಧ್ಯಪ್ರದೇಶದ ಕಟ್ನಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಪಂಕಜ್ಜೈನ್ ತಮ್ಮ ಮಗಳನ್ನ ಯಾವುದೇ ಖಾಸಗಿಶಾಲೆಯ ಎಲ್ಕೆಜಿ, ಯುಕೆಜಿಗೆ ಅಡ್ಮಿಷನ್ಮಾಡದೇ ಸರ್ಕಾರಿ ಅಂಗನವಾಡಿ ಶಾಲೆಗೆ ಸೇರಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಈ ಪ್ರದೇಶದಲ್ಲಿ ಎಲ್ಲ ಪ್ರೈವೇಟ್ ಪ್ಲೇ ಸ್ಕೂಲ್ಗಳಿಗಿಂತ ಅಂಗನವಾಡಿ ಚೆನ್ನಾಗಿದೆ.ಸರ್ಕಾರಿ ಅಧಿಕಾರಿಯಾಗಿರುವ ನನ್ನ ತರಹದವರು ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಕುಳುಹಿಸುವುದರಿಂದ ಅಲ್ಲಿಯ ಕೆಟ್ಟ ಪರಿಸ್ಥಿತಿಗಳು ತಾವಾಗಿಯೇ ಸುಧಾರಣೆ ಕಾಣುತ್ತವೆ. ಒಂದು ವೇಳೆ ಯಾವುದಾದ್ರೂ ಸಮಸ್ಯೆ ಇದ್ದರೆ ಅದು ಬೇಗ ನಮಗೆ ಗೊತ್ತಾಗುತ್ತೆ. ಇದರಿಂದ ಅವುಗಳ ಬಗ್ಗೆ ಬೇಗನೆ ಪರಿಹಾರ ಕಂಡುಕೊಳ್ಳಬಹುದು ಅಂತಾ ಐಎಎಸ್ ಆಫೀಸರ್ ಪಂಕಜ್ಜೈನ್ ಹೇಳುತ್ತಾರೆ.
ಈ ವಿಷಯ ರಾಜ್ಯಪಾಲರಾಗಿರುವ ಆನಂದಿಬೆನ್ಗೆ ತಿಳಿದು ಪಂಕಜ್ಜೈನ್ಗೆ ಪತ್ರವೊಂದನ್ನ ಬರೆದು ಶುಭಾಶಯ ಕೋರಿದ್ದಾರೆ. ಸದ್ಯ ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರ್ವಜನಿಕ ಅಧಿಕಾರಿ ಸಮಾಜಕ್ಕೆ ಮಾದರಿಯಾಗಿರಬೇಕು. ಇದನ್ನ ನೀವು ತೋರಿಸಿಕೊಟ್ಟಿದ್ದೀರಿ. ಇದರಿಂದ ಸಮಾಜ ನಿಮ್ಮಂತೆಯಾಗಿ, ಸರ್ಕಾರಿ ಅಧಿಕಾರಿಗಳ ಜವಾಬ್ದಾರಿ, ಸೇವೆಗಳನ್ನ ಹೆಚ್ಚಿಸುತ್ತದೆ. ಅಲ್ಲದೇ ಇದರಿಂದ ಸರ್ಕಾರಿ ಯೋಜನೆಗಳು ಸರಿಯಾಗಿ ರಿಲೀಸ್ ಆಗುತ್ತವೆ. ಹೀಗೆ ನಿಮ್ಮ ನಿಷ್ಠೆ, ಕಾರ್ಯ ಮುಂದುವರೆಸಿರಿ ಎಂದು ರಾಜ್ಯಪಾಲರು ಪತ್ರದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


