ದೇಶ

ಜಾರ್ಖಂಡ್ ನಲ್ಲಿ ನಕ್ಸಲೀಯರಿಂದ ಐಇಡಿ ಸ್ಫೋಟ: 11 ಸಿಆರ್ ಪಿಎಫ್, ರಾಜ್ಯ ಪೊಲೀಸ್ ಸಿಬ್ಬಂದಿಗೆ ಗಾಯ

ಜಾರ್ಖಂಡ್ ನ ಸೆರೈಕೆಲಾ ಖರ್ಸವನ್ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಕ್ಸಲೀಯರ ಐಇಡಿ ಸ್ಫೋಟಕ್ಕೆ 11 ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಮತ್ತು ರಾಜ್ಯ ಪೊಲೀಸ್ ...

ಜಾರ್ಖಂಡ್ ನಲ್ಲಿ ನಕ್ಸಲೀಯರಿಂದ ಐಇಡಿ ಸ್ಫೋಟ: 11 ಸಿಆರ್ ಪಿಎಫ್, ರಾಜ್ಯ ಪೊಲೀಸ್ ಸಿಬ್ಬಂದಿಗೆ ಗಾಯ
ಸಾಂದರ್ಭಿಕ ಚಿತ್ರ
Published On :
ರಾಂಚಿ: ಜಾರ್ಖಂಡ್ ನ ಸೆರೈಕೆಲಾ ಖರ್ಸವನ್ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಕ್ಸಲೀಯರ ಐಇಡಿ ಸ್ಫೋಟಕ್ಕೆ 11 ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸಿಆರ್ ಪಿಎಫ್ ನ ವಿಶೇಷ ಅರಣ್ಯ ಯುದ್ಧ ಘಟಕ, ಕೋಬ್ರಾ ಮತ್ತು ರಾಜ್ಯ ಪೊಲೀಸರು ಜಂಟಿ ತಂಡ ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ  ಕುಚೈ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ.
ಸುಧಾರಿತ ಸ್ಫೋಟಕ ಸಾಮಗ್ರಿಯಾದ ಐಇಡಿಯನ್ನು ಧೂಳು ತುಂಬಿದ ಹಾದಿಯಡಿ ಇಟ್ಟಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.