ದೇಶ

ಮಗಳ ಮದುವೆ ಸಂಭ್ರಮದಲ್ಲಿ ಹಾಡುತ್ತಲೇ ಮೃತಪಟ್ಟ ಸಬ್ ಇನ್ ಪೆಕ್ಟರ್!

ಮಗಳ ಮದುವೆಯ ಸಮಾರಂಭದಲ್ಲಿ ಹಾಡುತ್ತಲೇ ಸಬ್ ಇನ್ಸ್ ಪೆಕ್ಟರ್ ಒಬ್ಬರು ಇಹಲೋಕ ತ್ಯಜಿಸಿರುವ ದಾರುಣ ಘಟನೆ ಕೊಲ್ಲಂ ಜಿಲ್ಲೆಯ ನೀಂದಕಾರದಲ್ಲಿ ನಡೆದಿದೆ.

ಮಗಳ ಮದುವೆ ಸಂಭ್ರಮದಲ್ಲಿ ಹಾಡುತ್ತಲೇ ಮೃತಪಟ್ಟ ಸಬ್ ಇನ್ ಪೆಕ್ಟರ್!
ವಿಷ್ಣು ಪ್ರಸಾದ್
Published On :

ತಿರುವನಂತಪುರಂ: ಮಗಳ ಮದುವೆಯ ಸಮಾರಂಭದಲ್ಲಿ ಹಾಡುತ್ತಲೇ  ಸಬ್ ಇನ್ಸ್ ಪೆಕ್ಟರ್ ಒಬ್ಬರು ಇಹಲೋಕ ತ್ಯಜಿಸಿರುವ ದಾರುಣ ಘಟನೆ ಕೊಲ್ಲಂ ಜಿಲ್ಲೆಯ ನೀಂದಕಾರದಲ್ಲಿ ನಡೆದಿದೆ.

ತಿರುವನಂತಪುರದ ಸಬ್ ಇನ್ಸ್ ಪೆಕ್ಟರ್  (55) ವಿಷ್ಣು ಪ್ರಸಾದ್  ಮೃತಪಟ್ಟ ದುರ್ದೈವಿ.  ತನ್ನ ಕಿರಿಯ ಮಗಳ ಮದುವೆ ಸಮಾರಂಭದಲ್ಲಿ ಹಾಡುತ್ತಿದ್ದ ವಿಷ್ಣು ಪ್ರಸಾದ್  ಮಧ್ಯದಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ  ಬದುಕುಳಿಯಲಿಲ್ಲ.

ಹೃದಯಾಘಾತದಿಂದ ವಿಷ್ಣುಪ್ರಸಾದ್ ಮೃತಪಟ್ಟಿರಬಹುದೆಂದು  ಪೊಲೀಸರು ಶಂಕಿಸಿದ್ದಾರೆ. ಆದಾಗ್ಯೂ, ಕುಟುಂಬ ಸದಸ್ಯರು ಮಗಳು ಆರ್ಚಾಳಿಗೆ  ಈ ವಿಚಾರವನ್ನು ತಿಳಿಸಿದೆ ನಿನ್ನೆ ಮದುವೆ ಕಾರ್ಯ ಮುಗಿಸಿದ್ದಾರೆ ವಿಷ್ಣು ಪ್ರಸಾದ್ ಆಸ್ಪತ್ರೆಯಲ್ಲಿ ಗುಣಮುಖರಾಗುತ್ತಿರುವುದಾಗಿ ಸುಳ್ಳು ಹೇಳಿದ್ದಾರೆ.

ಇಂದು ವಿಷ್ಣುಪ್ರಸಾದ್ ಅಂತ್ಯಸಂಸ್ಕಾರ ಮಾಡಲಾಗಿದ್ದು, ಈ ವೇಳೆ ತನ್ನ ತಂದೆ ಮೃತಪಟ್ಟಿರುವುದು ಆರ್ಚಾಳಿಗೆ ತಿಳಿದಿದೆ.  ವಿಷ್ಣುಪ್ರಸಾದ್ ಹೆಂಡತಿ ಸುಷ್ಮಾ ಹಾಗೂ ಮಕ್ಕಳಾದ ಆರ್ಚಾ, ಅನುಪ್ರಸಾದ್, ಹಾಗೂ ಆರ್ಯ ಪ್ರಸಾದ್ ಅವರನ್ನು ಅಗಲಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ವಿಷ್ಣು ಪ್ರಸಾದ್  ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ತೀವ್ರ ಸಂತಾಪ ವ್ಯಕ್ಚಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.