'ಹುಚ್ಚು ನಾಯಿ, ಕ್ರಿಮಿ... ಇನ್ನೂ ಸಾಕಷ್ಟು...' ತಮ್ಮ ವಿರುದ್ಧದ ಕಾಂಗ್ರೆಸ್ ಬಳಸಿದ ಶಬ್ದಕೋಶದ ಬಗ್ಗೆ ಮೋದಿ ವಾಗ್ದಾಳಿ!
ತಮ್ಮ ವಿರುದ್ಧ ಪ್ರೀತಿಯ ನಿಘಂಟನ್ನು ಬಳಸಿದ್ದ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

Published On :
ಕುರುಕ್ಷೇತ್ರ: ತಮ್ಮ ವಿರುದ್ಧ ಪ್ರೀತಿಯ ನಿಘಂಟನ್ನು ಬಳಸಿದ್ದ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಹರ್ಯಾಣದ ಕುರುಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿರುದ್ಧ ಕಾಂಗ್ರೆಸ್ ಬಳಸಿದ್ದ ಶಬ್ದಗಳ ಪಟ್ಟಿಯನ್ನು ನೀಡಿದ್ದು, ಕಾಂಗ್ರೆಸ್ ಪ್ರೀತಿಯ ನಿಘಂಟನ್ನು ತನ್ನ ವಿರುದ್ಧ ಬಳಕೆ ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ನಂ.1 ಭ್ರಷ್ಟ ಎಂಬ ತಮ್ಮ ಹೇಳಿಕೆಗೆ ರಾಹುಲ್ ಗಾಂಧಿ "ಪ್ರಧಾನಿ ಮೋದಿಯವರ ದ್ವೇಷಕ್ಕೆ ಪ್ರತಿಯಾಗಿ ನೀಡುವುದಕ್ಕೆ ನನ್ನಲ್ಲಿ ಪ್ರೀತಿ ಮಾತ್ರವೇ ಇರುವುದು ಎಂದಿದ್ದರು. ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ತಮ್ಮ ವಿರುದ್ಧ ಬಳಕೆ ಮಾಡಿರುವ ಪ್ರೀತಿಯ ನಿಘಂಟಿನ ಶಬ್ದಗಳನ್ನು ಜನತೆಗೆ ನೆನಪಿಸಿದ್ದಾರೆ.
ನನ್ನನ್ನು ಕಾಂಗ್ರೆಸ್ ನವರು ಅವರ ಪ್ರೀತಿಯ ನಿಘಂಟನ್ನು ಬಳಸಿ ಮೂರ್ಖ, ಕ್ರಿಮಿ, ನೀಚ ವ್ಯಕ್ತಿ, ಹುಚ್ಚು ನಾಯಿ, ಹಿಟ್ಲರ್, ಮುಸೋಲಿನಿ, ಗಡಾಫಿ ಎಂದೆಲ್ಲಾ ಕರೆದಿದ್ದರು. ನನ್ನ ತಂದೆ, ತಾತನ ಬಗ್ಗೆ ಪ್ರಶ್ನೆ ಮಾಡಿದ್ದರು. ನನ್ನ ತಾಯಿಯನ್ನು ಅವಮಾನ ಮಾಡಿದ್ದರು ಕಾಂಗ್ರೆಸ್ ನ ಈ ನಡವಳಿಕೆಯನ್ನು ಯಾರೂ ಪ್ರಶ್ನೆ ಮಾಡಲಿಲ್ಲ, ನನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆಂದವರಿಗೆ ಕಾಂಗ್ರೆಸ್ ಬೆಂಬಲಿಸಿ ಟಿಕೆಟ್ ನೀಡಿದೆ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra ModiCongressಕಾಂಗ್ರೆಸ್ಮೋದಿAbusesLok Sabha Elections 2019ಲೋಕಸಭಾ ಚುನಾವಣೆ 2019dictionary of loveಪ್ರೀತಿಯ ನಿಘಂಟು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


