ದೇಶ

ಗುಜರಾತ್: ತನಗೆ ಕಚ್ಚಿದ ಹಾವನ್ನು ತಾನೂ ಕಚ್ಚಿ ಸಾಯಿಸಿದ, ತಾನೂ ಪ್ರಾಣ ಬಿಟ್ಟ,!

ತನಗೆ ಕಚ್ಚಿದ ಹಾವನ್ನು ತಾನೂ ಕಚ್ಚಿ ಸಾಯಿಸಿ 70 ವರ್ಷದ ವೃದ್ಧ ವ್ಯಕ್ತಿ ಮೃತಪಟ್ಟಿರುವ ವಿಲಕ್ಷಣ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಗುಜರಾತ್: ತನಗೆ ಕಚ್ಚಿದ ಹಾವನ್ನು ತಾನೂ ಕಚ್ಚಿ ಸಾಯಿಸಿದ, ತಾನೂ ಪ್ರಾಣ ಬಿಟ್ಟ,!
ಗುಜರಾತ್: ತನಗೆ ಕಚ್ಚಿದ ಹಾವನ್ನು ತಾನೂ ಕಚ್ಚಿ ಸಾಯಿಸಿದ, ತಾನೂ ಪ್ರಾಣ ಬಿಟ್ಟ,!
Published On :
ಮಹಿಸಗರ್: ತನಗೆ ಕಚ್ಚಿದ ಹಾವನ್ನು ತಾನೂ ಕಚ್ಚಿ ಸಾಯಿಸಿ 70 ವರ್ಷದ ವೃದ್ಧ ವ್ಯಕ್ತಿ ಮೃತಪಟ್ಟಿರುವ ವಿಲಕ್ಷಣ ಘಟನೆ ಗುಜರಾತ್ ನಲ್ಲಿ ನಡೆದಿದೆ. 
ಗುಜರಾತ್ ನ ಮಹಿಸಗರ್ ನಲ್ಲಿದ್ದ ರೈತ ಪರ್ವತ್ ಗಾಲಾ ಬರಿಯಾ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ. ಇದರಿಂದ ಆಕ್ರೋಶಗೊಂಡ ರೈತ ಹಾವಿನ ಮೇಲೆ ಸೇಡು ತೀರಿಸಿಕೊಳ್ಳಲು ಅದನ್ನು ತಾನೂ ಕಚ್ಚಿದ್ದಾನೆ. ಹತ್ತಿರದಲ್ಲೇ ಇದ್ದ ಸಂಬಂಧಿಕರು ಈ ಘಟನೆಯನ್ನು ನೋಡಿ ಹಾವನ್ನು ಅಲ್ಲೇ ದಹನ ಮಾಡಿದ್ದಾರೆ. ಹಾವು ಕಚ್ಚಿದ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕಿ ಉಳಿಯಲಿಲ್ಲ. 
ತಕ್ಷಣದಲ್ಲೇ ಆ ರೈತನಿಗೆ ವೈದ್ಯಕೀಯ ಸೌಲಭ್ಯವೂ ಸಿಗಲಿಲ್ಲ. ಮೂರು ಆಸ್ಪತ್ರೆಗಳು ಅಲೆದರೂ ಸಹ ಸೂಕ್ತ ವೈದ್ಯಕೀಯ ಸೌಲಭ್ಯ ದೊರೆಯದೇ ಆತ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.