ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ನಕಲಿ ಸಹಿ: ಮುರಳಿಧರ ರಾವ್ ಸೇರಿ 9 ಮಂದಿ ವಿರುದ್ಧ ಪ್ರಕರಣ
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಕಲಿ ಸಹಿ ಬಳಸಿ ಪತ್ರ ತಯಾರಿಕೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಬಿಜೆಪಿ ಪ್ರಧಾನ ಕಾರ್ಯದರ್ಶಿ,...

Published On :
ಹೈದರಾಬಾದ್: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಕಲಿ ಸಹಿ ಬಳಸಿ ಪತ್ರ ತಯಾರಿಕೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಪಿ. ಮುರಳಿಧರ ರಾವ್ ಸೇರಿ 9 ಮಂದಿಯ ವಿರುದ್ಧ ಹೈದರಾಬಾದ್ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೈದರಾಬಾದ್ ರಿಯಲ್ ಎಸ್ಟೇಟ್ ಉದ್ಯಮಿ ಮಹಿಪಾಲ್ ರೆಡ್ಡಿ ಪತ್ನಿ ಟಿ. ಪ್ರವರ್ಣ ರೆಡ್ಡಿ ಎನ್ನುವವರು ನೀಡಿದ ದೂರಿನ ಹಿನ್ನೆಲೆಯಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಫಾರ್ಮಾ ಎಕ್ಸಿಲ್ ಅಧ್ಯಕ್ಷ ಸ್ಥಾನ ಕೊಡಿಸುವ ಆಮಿಷ ಒಡ್ಡಿ ಮುರಳಿಧರ ರಾವ್ ಹಾಗೂ ಇತರರು ರೆಡ್ಡಿಯವರಿಂದ ೨.೧೭ ಕೋಟಿ ರು ಪಡೆದು ವಂಚಿಸಿದ್ದಾರೆ, ಈ ವೇಳೆ ನಿರ್ಮಲಾ ಸೀತಾರಾಮನ್ ಅವರ ನಕಲಿ ಸಹಿ ಇದ್ದ ಪತ್ರವನ್ನು ನಮಗೆ ತೋರಿಸಿದ್ದ ಕಾರಣಕ್ಕೆ ನಾವು ರಾವ್ ಅವರಿಗೆ ಹಣ ನೀಡಿದೆವು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಮುರಳಿಧರರಾವ್ ಮಾತ್ರ "ಈ ಪ್ರಕರಣಕ್ಕೆ, ನಮಗೆ ಸಂಬಂಧವಿಲ್ಲ" ಎಂದು ತಮ್ಮ ಮೇಲಿನ ಆರೋಪವನ್ನು ಸಾರಾಸಗಟು ನಿರಾಕರಿಸಿದ್ದಾರೆ.
ಐಪಿಸಿ ಸೆಕ್ಷನ್ ೪೦೬೯ಕ್ರಿಮ್ಮಿನಲ್ ವಿಶ್ವಾಸ ದ್ರೋಹ), ೪೨೦ (ವಂಚನೆ), ೪೭೧(ನಕಲಿ ಸಹಿ), ೫೦೬ (ಕ್ರಿಮಿನಲ್ ದುರುದ್ದೇಶ), ೧೨೦-ಬಿ (ಕ್ರಿಮಿನಲ್ ಪಿತೂರಿ), ಸಿಆರ್ ಪಿಸಿ ಸೆಕ್ಷನ್ ೧೫೬(೩) ಅಡಿಯಲ್ಲಿ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


