ಗೋವಾ: ಸಾವಂತ್ ಸಂಪುಟದಿಂದ ಉಪ ಮುಖ್ಯಮಂತ್ರಿ ಧವಳಿಕರ್ ವಜಾ
ಮಹತ್ವದ ರಾಜಕೀಯ ಬೆಳವಣೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಹಾರಾಷ್ಟ್ರವಾದಿ ಗೊಮಾಂತಕ ಪಕ್ಷದ(ಎಂಜಿಪಿ) ನಾಯಕ ಮತ್ತು...

Published On :
ಪಣಜಿ: ಮಹತ್ವದ ರಾಜಕೀಯ ಬೆಳವಣೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮಹಾರಾಷ್ಟ್ರವಾದಿ ಗೊಮಾಂತಕ ಪಕ್ಷದ(ಎಂಜಿಪಿ) ನಾಯಕ ಮತ್ತು ಉಪಮುಖ್ಯಮಂತ್ರಿ ಸುಡಿನ್ ಧವಳಿಕರ್ ಅವರನ್ನು ತಮ್ಮ ಸಂಪುಟದಿಂದ ಮಂಗಳವಾರ ವಜಾ ಮಾಡಿದ್ದಾರೆ. ಕೇವಲ ಒಂದು ವಾರದ ಹಿಂದೆಯಷ್ಟೆ ಅವರು ಸಂಪಟಕ್ಕೆ ಸೇರಿದ್ದರು.
ಮುಖ್ಯಮಂತ್ರಿಯ ಶಿಫಾರಸ್ಸಿನ ಮೇರೆಗೆ ಧವಳಿಕಾರ್ ಅವರನ್ನು ರಾಜ್ಯಪಾಲ ಮೃದುಲಾ ಸಿನ್ಹಾ ಸಂಪುಟದಿಂದ ತೆಗೆದುಹಾಕಿದ್ದಾರೆ. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಧವಳಿಕಾರ್, ಎಂಜಿಪಿ ಮೇಲೆ ಚೌಕಿದಾರರುಗಳು ದೌರ್ಜನ್ಯ ಮಾಡಿದ್ದಾರೆ. ಇದಕ್ಕೆ ಜನರು ಪಾಠ ಕಲಿಸಲಿದ್ದಾರೆ ಎಂದರು. ಬಿಜೆಪಿ ಕುತಂತ್ರ ರಾಜಕಾರಣ ಮಾಡಿ ಗೋವಾ ಜನರಿಗೆ ಆಘಾತ ಉಂಟು ಮಾಡಿದೆ. ಇದಕ್ಕೆ ಅದು ತಕ್ಕ ಬೆಲೆ ತೆರಬೇಕು. ಜನತೆ ಎಲ್ಲವನ್ನು ನೋಡುತ್ತಿದ್ದಾರೆ ಎಂದರು. ಎಂ.ಜಿ.ಪಿ ಯ ಮೂವರು ಶಾಸಕರಲ್ಲಿ ಇಬ್ಬರು ಇಂದು ಪಕ್ಷದಿಂದ ಬೇರೆಯಾಗಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ.
ಮನೋಹರ್ ಅಜ್ಗಾಂಕರ್ ಮಂತ್ರಿಯಾಗಿದ್ದಾರೆ. ಗೋವಾ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಜಿಎಸ್ಐಡಿಸಿ) ಅಧ್ಯಕ್ಷರಾಗಿರುವ ದೀಪಕ್ ಪೌಸ್ಕರ್ ಅವರು ಪ್ರಮೋದ್ ಸಾವಂತ್ ಸಂಪುಟಕ್ಕೆ ಸಂಜೆ ಸೇರಲಿದ್ದಾರೆ ಎಂದು ಹೇಳಲಾಗಿದೆ. ಇದು ಮುಂದಿನ ತಿಂಗಳು ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


