ಬಿಜೆಪಿಯ ಬೆದರಿಕೆ ರಾಜಕಾರಣ ಮತ್ತೊಮ್ಮೆ ಸಾಬೀತು, ಎಲ್ಲ ಮೈತ್ರಿ ಪಕ್ಷಗಳಿಗೂ ಇದು ಎಚ್ಚರಿಕೆ: ಗೋವಾ ಕಾಂಗ್ರೆಸ್
ಬಿಜೆಪಿ ವಿರುದ್ಧ ಕಿಡಿಕಾರಿರುವ ಗೋವಾ ಕಾಂಗ್ರೆಸ್, ಬಿಜೆಪಿಯ ಬೆದರಿಕೆ ರಾಜಕಾರಣ ಮತ್ತೊಮ್ಮೆ ಸಾಬೀತು, ಎಲ್ಲ ಮೈತ್ರಿ ಪಕ್ಷಗಳಿಗೂ ಇದು ಎಚ್ಚರಿಕೆ ಕರೆಗಂಟೆ ಎಂದು ಹೇಳಿದೆ.

Published On :
ಪಣಜಿ: ಗೋವಾದಲ್ಲಿ ರಾತ್ರೋ ರಾತ್ರಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆ ಮತ್ತೊಂದು ಸುತ್ತಿನ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದು, ಈ ಬಗ್ಗೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಗೋವಾ ಕಾಂಗ್ರೆಸ್, ಬಿಜೆಪಿಯ ಬೆದರಿಕೆ ರಾಜಕಾರಣ ಮತ್ತೊಮ್ಮೆ ಸಾಬೀತು, ಎಲ್ಲ ಮೈತ್ರಿ ಪಕ್ಷಗಳಿಗೂ ಇದು ಎಚ್ಚರಿಕೆ ಕರೆಗಂಟೆ ಎಂದು ಹೇಳಿದೆ.
ಬಿಜೆಪಿ ಮೈತ್ರಿ ಪಕ್ಷ ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಇದರು ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೋವಾ ಕಾಂಗ್ರೆಸ್ ನ ಮುಖಂಡ ಸುನಿಲ್ ಕಾವ್ತಂಕರ್ ಅವರು, ಬಿಜೆಪಿ ಕರಾಳ ಮುಖ ಮತ್ತೊಮ್ಮೆ ಬಯಲಾಗಿದೆ. ಎಂಜಿಪಿ ಇಬ್ಬರು ಶಾಸಕರನ್ನು ಸೆಳೆಯುವ ಮೂಲಕ ಬಿಜೆಪಿ ಮತ್ತೊಮ್ಮೆ ತನ್ನ ಬೆದರಿಕೆ ರಾಜಕೀಯವನ್ನು ಮುಂದುವರೆಸಿದೆ. ನಿಜಕ್ಕೂ ಎಲ್ಲ ಮೈತ್ರಿ ಪಕ್ಷಗಳಿಗೂ ಇದು ಎಚ್ಚರಿಕೆಯ ಕರೆಗಂಟೆ ಎಂದು ಅವರು ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿpanajiGoaಗೋವಾಪಣಜಿMGPಎಂಜಿಪಿCM Pramod SawantParty Mergingಪಕ್ಷ ವಿಲೀನಸಿಎಂ ಪ್ರಮೋದ್ ಸಾವಂತ್Sunil Kawthankarಸುನಿಲ್ ಕಾವ್ತಂಕರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


