ದೇಶ

ಕಾಂಗ್ರೆಸ್ ನಾಯಕರು ಚುನಾವಣೆ ಗೆಲ್ಲುತ್ತಾರೆ ಆದರೆ... ರಾಮ್ ಮಾಧವ್ ಏನು ಹೇಳಿದ್ದಾರೆ ಕೇಳಿ!

ಬಿಜೆಪಿ ನಾಯಕ ರಾಮ್ ಮಾಧವ್ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿದ್ದು, ಕಾಂಗ್ರೆಸ್ ನಾಯಕರು ಚುನಾವಣೆ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು ಚುನಾವಣೆ ಗೆಲ್ಲುತ್ತಾರೆ ಆದರೆ... ರಾಮ್ ಮಾಧವ್ ಏನು ಹೇಳಿದ್ದಾರೆ ಕೇಳಿ!
ಕಾಂಗ್ರೆಸ್ ನಾಯಕರು ಚುನಾವಣೆ ಗೆಲ್ಲುತ್ತಾರೆ ಆದರೆ... ರಾಮ್ ಮಾಧವ್ ಏನು ಹೇಳಿದ್ದಾರೆ ಕೇಳಿ!
Published On :
ಗುವಾಹಟಿ: ಬಿಜೆಪಿ ನಾಯಕ ರಾಮ್ ಮಾಧವ್ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡಿದ್ದು, ಕಾಂಗ್ರೆಸ್ ನಾಯಕರು ಚುನಾವಣೆ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. 
ಕಾಂಗ್ರೆಸ್ ನಾಯಕರು ಪಾಕಿಸ್ತಾನದಿಂದ ಚುನಾವಣೆಗೆ ಸ್ಪರ್ಧಿಸಿದರೆ ಚುನಾವಣೆಯಲ್ಲಿ ಖಂಡಿತವಾಗಿಯೂ ಗೆಲ್ಲುತ್ತಾರೆ ಎಂದು ರಾಮ್ ಮಾಧವ್ ಭಾರತದ ಹಳೆಯ ರಾಜಕೀಯ ಪಕ್ಷದ ನಾಯಕರ ಬಗ್ಗೆ ವ್ಯಂಗ್ಯವಾಡಿದ್ದಾರೆ. 
ಕಾಂಗ್ರೆಸ್ ನಾಯಕರ ಟ್ವೀಟ್ ಗಳನ್ನು ಭಾರತೀಯರಿಗಿಂತಲೂ ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಹೆಚ್ಚು ರಿಟ್ವೀಟ್ ಮಾಡಲಾಗುತ್ತದೆ. ನಮ್ಮ ದೇಶದ ಜನತೆಗಿಂತಲೂ ಹೆಚ್ಚು ಪಾಕಿಸ್ತಾನದ ಜನತೆ ಕಾಂಗ್ರೆಸ್ ನಾಯಕ ಟ್ವೀಟ್ ಗಳನ್ನು ರಿಟ್ವೀಟ್ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದ ನಾಯಕರು ಬಹುಶಃ ಪಾಕಿಸ್ತಾನದಲ್ಲಿ ಚುನಾವಣೆಗೆ ನಿಂತರೆ ಅಲ್ಲಿ ಗೆಲ್ಲುತ್ತಾರೆ.  ಇದು ನಮ್ಮ ಪ್ರಧಾನ ಪ್ರತಿಪಕ್ಷ ಕಾಂಗ್ರೆಸ್ ನ ಸ್ಥಿತಿ ಎಂದು ರಾಮ್ ಮಾಧವ್ ಲೇವಡಿ ಮಾಡಿದ್ದಾರೆ. 
ಪ್ರತಿಪಕ್ಷಗಳ ನಾಯಕರು ಭಾರತಕ್ಕಾಗಿ ಹೋರಾಡುತ್ತಿದ್ದಾರೋ ಅಥವಾ ಪಾಕಿಸ್ತಾನದ ಪರವಾಗಿ ಹೋರಾಡುತ್ತಿದ್ದಾರೋ ಎಂಬುದು ಅರ್ಥ ಮಾಡಿಕೊಳ್ಳುವುದಕ್ಕೆ ಜನತೆ ವಿಫಲರಾಗಿದ್ದಾರೆ. ಪ್ರತಿಪಕ್ಷಗಳು ಜನತೆಗೆ ಯಾವ ಸಂದೇಶ ರವಾನೆ ಮಾಡುತ್ತಿದ್ದಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ ಎಂದು ರಾಮ್ ಮಾಧವ್ ಪ್ರತಿಪಕ್ಷಗಳ ವೈಫಲ್ಯವನ್ನು ಟೀಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.