ಖಾತೆ ಹಂಚಿಕೆ ಮಾಡಿದ ಗೋವಾ ನೂತನ ಮುಖ್ಯಮಂತ್ರಿ: ಗೃಹ, ಹಣಕಾಸು ಉಳಿಸಿಕೊಂಡ ಪ್ರಮೋದ್ ಸಾವಂತ್
ಗೋವಾ ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದು, ಗೃಹ ಖಾತೆ ಹಾಗೂ ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

Published On :
ಪಣಜಿ: ಗೋವಾ ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಪುಟ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದು, ಗೃಹ ಖಾತೆ ಹಾಗೂ ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ಈ ಹಿಂದಿನ ಮುಖ್ಯಮಂತ್ರಿ ದಿ.ಮನೋಹರ್ ಪರಿಕ್ಕರ್ ಅವರ ಬಳಿ ಇದ್ದ ಎಲ್ಲಾ ಖಾತೆಗಳನ್ನೂ ಪ್ರಮೋದ್ ಸಾವಂತ್ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.
ಪ್ರಮೋದ್ ಸಾವಂತ್ ಸರ್ಕಾರದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳಿದ್ದು ಮಾ.12 ರಂದು ಪ್ರಮೋದ್ ಸಾವಂತ್ ಅವರೊಂದಿಗೆ 11 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು.
ಉಪಮುಖ್ಯಮಂತ್ರಿ ಸುದಿನ್ ಧಾವಳೀಕರ್ ಗೆ ಸಾರಿಗೆ ಖಾತೆ, ಲೋಕೋಪಯೋಗಿ, ನದಿ ಸಂಚಾರ ಹಾಗೂ ಮ್ಯೂಸಿಯಂ ಇಲಾಖೆಗಳನ್ನು ನೀಡಲಾಗಿದೆ. ಮತ್ತೋರ್ವ ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿಗೆ ಯೋಜನೆ, ಕೃಷಿ, ದಾಖಲೆಗಳು ಮತ್ತು ಪುರಾತತ್ತ್ವ ಶಾಸ್ತ್ರ ಮತ್ತು ಕಾರ್ಖಾನೆಗಳು ಮತ್ತು ಬಾಯ್ಲರ್ ಖಾತೆಗಳನ್ನು ನೀಡಲಾಗಿದೆ.
ಮೂವರು ಪಕ್ಷೇತರ ಶಾಸಕರಿಗೂ ಖಾತೆಗಳನ್ನು ನೀಡಲಾಗಿದ್ದು, ಮನೋಹರ್ ಅಜ್ಗಾಂಕರ್ (ಎಂಜಿಪಿ) ಗೆ ಪ್ರವಾಸೋದ್ಯಮ ಖಾತೆ ಕ್ರೀಡಾ ಮತ್ತು ಮುದ್ರಣ ಇಲಾಖೆ ಇಲಾಖೆ ನೀಡಲಾಗಿದೆ. ಶಾಸಕ ರೋಹನ್ ಖೌಂಟೆ ಕಂದಾಯ, ಮಾಹಿತಿ ತಂತ್ರಜ್ಞಾನಹಾಗೂ ಕಾರ್ಮಿಕ, ಉದ್ಯೋಗ ಖಾತೆಗಳನ್ನು ನೀಡಲಾಗಿದೆ. ಮತ್ತೋರ್ವ ಶಾಸಕ ಗೋವಿಂದ್ ಗವಾಡೆ ಕಲೆ ಮತ್ತು ಸಂಸ್ಕೃತಿ, ನಾಗರಿಕ ಪೂರೈಕೆ, ಬುಡಕಟ್ಟು ಕಲ್ಯಾಣ ಇಲಾಖೆಯನ್ನು ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


