ವೈಮಾನಿಕ ದಾಳಿಯ ಎಫೆಕ್ಟ್: ಗಡಿಯಲ್ಲಿ ಎಫ್-16 ಸ್ಕ್ವಾಡ್ರನ್ ನಿಯೋಜನೆ ಮಾಡಲಿರುವ ಪಾಕಿಸ್ತಾನ!
ಪಾಕಿಸ್ತಾನದ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಎಫ್-16 ಯುದ್ಧ ವಿಮಾನಗಳ ಹೊಸ ಸ್ಕ್ವಾಡ್ರನ್ ನ್ನು ನಿಯೋಜನೆ ಮಾಡಲು ನಿರ್ಧರಿಸಿದೆ.

Published On :
ನವದೆಹಲಿ: ಪಾಕಿಸ್ತಾನದ ಉಗ್ರರ ನೆಲೆ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಎಫ್-16 ಯುದ್ಧ ವಿಮಾನಗಳ ಹೊಸ ಸ್ಕ್ವಾಡ್ರನ್ ನ್ನು ನಿಯೋಜನೆ ಮಾಡಲು ನಿರ್ಧರಿಸಿದೆ.
ವಾಯುಪಡೆ ಮೂಲಗಳ ಪ್ರಕಾರ ಪಾಕಿಸ್ತಾನ ಗಡಿ ಪ್ರದೇಶದಲ್ಲಿ ನಿಯೋಜನೆ ಮಾಡುವುದಕ್ಕಾಗಿಯೇ ಪ್ರತ್ಯೇಕವಾದ ಎಫ್-16 ಸ್ಕ್ವಾಡ್ರನ್ ನ್ನು ರಚನೆ ಮಾಡಿದೆ.
ಮುಶಾಫ್ ವಾಯುನೆಲೆಯಲ್ಲಿ ಈ ಸ್ಕ್ವಾಡ್ರನ್ ನ್ನು ರಚನೆ ಮಾಡಲಾಗಿದ್ದು, ಇದಕ್ಕೆ ಅಗ್ರೆಸರ್ ಎಂದು ನಾಮಕರಣ ಮಾಡಲಾಗಿದೆ.
ಸ್ಕ್ವಾಡ್ರನ್ 29 ನಲ್ಲಿ 8 ಎಫ್-16 ಯುದ್ಧವಿಮಾನಗಳಿರಲಿದ್ದು ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸಲು ಯಾವುದೆ ಪರಿಸ್ಥಿತಿಯಲ್ಲೂ ಸನ್ನದ್ಧವಾಗಿರಲಿದೆ. ಮುಶಾಫ್ ವಾಯುನೆಲೆ ಪಾಕಿಸ್ತಾನದ ಪುರಾತನವಾದ ವಾಯುನೆಲೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


