ದೇಶ

ರಸ್ತೆ ಬದಿಯ ಹೊಟೆಲ್ ನಲ್ಲೇ ಊಟ, ಸೈಕಲ್ ಸವಾರಿ; ಪರಿಕ್ಕರ್ ಎಂಬ ಸಾಮಾನ್ಯರ ಮಿನಿಸ್ಟರ್!

ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಜನತೆಗಾಗಿ ದುಡಿದು ಇಹಲೋಕ ತ್ಯಜಿಸಿರುವ ಗೋವಾ ಸಿಎಂ ದಿ. ಮನೋಹರ್ ಪರಿಕ್ಕರ್ ಅವರು ತಮ್ಮ ಸರಳ ಸ್ವಭಾವದಿಂದಲೇ ಖ್ಯಾತರಾದವರು.

ರಸ್ತೆ ಬದಿಯ ಹೊಟೆಲ್ ನಲ್ಲೇ ಊಟ, ಸೈಕಲ್ ಸವಾರಿ; ಪರಿಕ್ಕರ್  ಎಂಬ ಸಾಮಾನ್ಯರ ಮಿನಿಸ್ಟರ್!
ಸಂಗ್ರಹ ಚಿತ್ರ
Published On :
ಪಣಜಿ: ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಜನತೆಗಾಗಿ ದುಡಿದು ಇಹಲೋಕ ತ್ಯಜಿಸಿರುವ ಗೋವಾ ಸಿಎಂ ದಿ. ಮನೋಹರ್ ಪರಿಕ್ಕರ್ ಅವರು ತಮ್ಮ ಸರಳ ಸ್ವಭಾವದಿಂದಲೇ ಖ್ಯಾತರಾದವರು.
ಮನೋಹರ್​ ಪರಿಕ್ಕರ್​ ಅವರು ಸರಳ ಸ್ವಭಾವದವರು. ಅವರು ಎಂದಿಗೂ ಐಶ್ವರ್ಯ, ಸುಪ್ಪತ್ತಿಗೆಯನ್ನು ಹುಡುಕಿ ಹೋದವರಲ್ಲ. ಸರಳತೆಯ ಮೂರ್ತಿಯಂತಿದ್ದ ಪರಿಕ್ಕರ್​ ಆಗಾಗ್ಗೆ ತಮ್ಮ ಸರಳತೆಯಿಂದಲೇ ಸುದ್ದಿಯಾಗುತ್ತಿದ್ದರು. 
ಪರಿಕ್ಕರ್ ಅವರ ಸರಳತೆ ಕೆಲ ಮೆಲುಕುಗಳು ಇಲ್ಲಿವೆ.
Story image
ಪರಿಕ್ಕರ್​ ಒಮ್ಮೆ ಟೀ ಕುಡಿಯಲು ಬೀದಿ ಬದಿಯ ಚಹಾ ಅಂಗಡಿಗೆ ಬಂದಿದ್ದರು. ರಕ್ಷಣಾ ಸಚಿವರಾಗಿದ್ದಾಗಲೇ ಪರಿಕ್ಕರ್​ ಅವರು ಈ ರೀತಿ ನಡೆದುಕೊಂಡಿದ್ದು ಅಕ್ಷರಶಃ ಜನರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡಿಬಿಟ್ಟಿತ್ತು. 
Story image
ಸೈಕಲ್​ ಸವಾರಿ: ಪರಿಕ್ಕರ್​ ಅವರು ಒಮ್ಮೆ ಶಾಲೆಗೆ ಭೇಟಿ ನೀಡಿದ್ದಾಗ ವಿದ್ಯಾರ್ಥಿಯೊಬ್ಬನ ಸೈಕಲ್​ ತುಳಿದು ತಮ್ಮ ಬಾಲ್ಯದ ಘಟನೆಗಳ ನೆನೆದು ಸಂಭ್ರಮಿಸಿದ್ದರು. ಆ ಬಳಿಕ ಪರಿಕ್ಕರ್ ಅವರ ಸೈಕಲ್ ಸವಾರಿ ಕೂಡ ಸುದ್ದಿಯಾಗಿತ್ತು. 
Story image
ಬೈಕ್​ ಸುತ್ತಾಟ: ಪರಿಕ್ಕರ್​ ಅವರಿಗೆ ಅಪಾರ ಮಿತ್ರರು. ಒಮ್ಮೆ ಬೈಕ್​ ರಾಲಿ ನಡೆಯುವಾಗ ಸಿಎಂ ಸ್ಥಾನದಲ್ಲಿದ್ದ ಪರಿಕ್ಕರ್​ ಅವರೇ ಸ್ನೇಹಿತನ ಬೈಕ್​ನಲ್ಲಿ ಸುತ್ತಾಡಿದ್ದರು. 
Story image
ಮತದಾನಕ್ಕೆ ಕ್ಯೂ: ಪರಿಕ್ಕರ್​ ಅವರು ಮತ ಹಾಕುವ ಸಂದರ್ಬದಲ್ಲಿ ಸಾಮಾನ್ಯರಂತೆ ಕ್ಯೂನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದರು. 
Story image
ವಧುವರರಿಗೆ ಗಿಫ್ಟ್​ ಕೊಡಲು ಬಂದರು: ಪರಿಕ್ಕರ್​ ಅವರು ತಮ್ಮ ಸ್ನೇಹಿತರೊಬ್ಬರ ಮಗನ ಮದುವೆಗೆ ಬಂದಿದ್ದಾಗ ಇತರರಂತೆ ತಾವೂ ಕೂಡ ಕ್ಯೂನಲ್ಲಿ ನಿಂತು ಬಂದು ಒಂದು ಗಿಫ್ಟ್​ ಕೊಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.