ದೇಶ

ಪರಿಕ್ಕರ್ ಆರೋಗ್ಯ ಗಂಭೀರ; ಹೊಸ ಸಿಎಂ ಹುಡುಕಾಟಕ್ಕೆ ಮುಂದಾದ ಬಿಜೆಪಿ

ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿರುವಂತೆಯೇ ಇತ್ತ ಗೋವಾದಲ್ಲಿ ರಾಜಕೀಯ ಗರಿಗೆದರಿದ್ದು, ಅತ್ತ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಗಾಗಿ ಅವಕಾಶ ಕೋರಿದ ಬೆನ್ನಲ್ಲೇ ಅತ್ತ ಬಿಜೆಪಿ ಕೂಡ ಪರಿಕ್ಕರ್ ಗೆ ಪರ್ಯಾಯವಾಗಿ ನೂತನ ಸಿಎಂ ಹುಡುಕಾಟದಲ್ಲಿ ತೊಡಗಿದೆ.

ಪರಿಕ್ಕರ್ ಆರೋಗ್ಯ ಗಂಭೀರ; ಹೊಸ ಸಿಎಂ ಹುಡುಕಾಟಕ್ಕೆ ಮುಂದಾದ ಬಿಜೆಪಿ
ಸಂಗ್ರಹ ಚಿತ್ರ
Published On :
ಪಣಜಿ: ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿರುವಂತೆಯೇ ಇತ್ತ ಗೋವಾದಲ್ಲಿ ರಾಜಕೀಯ ಗರಿಗೆದರಿದ್ದು, ಅತ್ತ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆಗಾಗಿ ಅವಕಾಶ ಕೋರಿದ ಬೆನ್ನಲ್ಲೇ ಅತ್ತ ಬಿಜೆಪಿ ಕೂಡ ಪರಿಕ್ಕರ್ ಗೆ ಪರ್ಯಾಯವಾಗಿ ನೂತನ ಸಿಎಂ ಹುಡುಕಾಟದಲ್ಲಿ ತೊಡಗಿದೆ.
ಹೌದು.. ಸಿಎಂ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿರುವಂತೆಯೇ ಇತ್ತ ಬಿಜೆಪಿ ಕೂಡ ನೂತನ ಸಿಎಂ ಆಯ್ಕೆಗಾಗಿ ಕಸರತ್ತು ಆರಂಭಿಸಿದೆ. ಮೂಲಗಳ ಪ್ರಕಾರ ಈಗಾಗಲೇ ಬಿಜೆಪಿ ಹೈಕಮಾಂಡ್ ನೂತನ ಸಿಎಂಗಾಗಿ ಶೋಧ ಕಾರ್ಯ ಆರಂಭಿಸಿದೆ. ಈ ನಡುವೆ ನೂತನ ಗೋವಾ ಸಿಎಂ ಆಯ್ಕೆ ಕಸರತ್ತು ಆರಂಭವಾಗಿರುವಂತೆಯೇ ಪ್ರಮುಖ ನಾಯಕರ ಕುರಿತು ಲಾಭಿ ಕೂಡ ಆರಂಭವಾಗಿದೆ. ಇತ್ತ ಗೋವಾ ಬಿಜೆಪಿ ಶಾಸಕರು ಶಾಸಕರಲ್ಲೇ ಓರ್ವ ಪ್ರಮುಖ ಮುಖಂಡರನ್ನು ಸಿಎಂ ಆಗಿ ಆಯ್ಕೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಈಗಾಗಲೇ ಬಿಜೆಪಿ ಹೈಕಮಾಂಡ್ ಗೋವಾ ಬಿಜೆಪಿ ಶಾಸಕರೊಂದಿಗೆ ಚರ್ಚೆ ನಡೆಸಿದ್ದು, ಭಾನುವಾರ  ಈ ಬಗ್ಗೆ ದೆಹಲಿಯಲ್ಲಿ ಸಭೆ ನಡೆಸಲಾಗುತ್ತಿದೆ. ಶಾಸಕರೊಂದಿಗಿನ ಸಭೆ ಬಳಿಕ ಬಿಜೆಪಿ ಗೋವಾದ ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷ, ಗೋವಾ ಫಾರ್ವರ್ಡ್ ಪಾರ್ಟಿ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ನಡೆಸಲಿದೆ. ಅಂತೆಯೇ ಸರ್ಕಾರಕ್ಕೆ ಬೆಂಬಲ ನೀಡಿರುವ ಮೂವರು ಪಕ್ಷೇತರ ಶಾಸಕರೊಂದಿಗೂ ಬಿಜೆಪಿ ಹೈಕಮಾಂಡ್ ಚರ್ಚೆ ನಡೆಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.