ದೇಶ

ಪೊಲ್ಲಾಚಿ ಮಾದರಿಯ ಪೈಶಾಚಿಕ ಕೃತ್ಯ: ಮಹಿಳೆಯರಿಗೆ ಚಾಲಕನಿಂದ ಲೈಂಗಿಕ ಕಿರುಕುಳ, ವಿಡಿಯೋ ಚಿತ್ರೀಕರಣ!

ಪೊಲ್ಲಾಚಿ ಮಾದರಿಯಲ್ಲೇ ತಮಿಳುನಾಡಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲ್ಲಾಚಿ ಮಾದರಿಯ ಪೈಶಾಚಿಕ ಕೃತ್ಯ: ಮಹಿಳೆಯರಿಗೆ ಚಾಲಕನಿಂದ ಲೈಂಗಿಕ ಕಿರುಕುಳ, ವಿಡಿಯೋ ಚಿತ್ರೀಕರಣ!
ಪೊಲ್ಲಾಚಿ ಮಾದರಿಯ ಪೈಶಾಚಿಕ ಕೃತ್ಯ: ಮಹಿಳೆಯರಿಗೆ ಚಾಲಕನಿಂದ ಲೈಂಗಿಕ ಕಿರುಕುಳ, ವಿಡಿಯೋ ಚಿತ್ರೀಕರಣ!
Published On :
ಪೊಲ್ಲಾಚಿ ಮಾದರಿಯಲ್ಲೇ ತಮಿಳುನಾಡಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಕಾರ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 
ಬಂಧಿತ ಕಾರು ಚಾಲಕ ನಾಗಟ್ಟಿನಂ ನ ಮೂಲದವನಾಗಿದ್ದು, 22 ವರ್ಷದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿದ್ದಾನೆ. ಈ ವ್ಯಕ್ತಿ ಮತ್ತಷ್ಟು ಮಹಿಳೆಯರಿಗೆ ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿರುವ ಸಾಧ್ಯತೆ ಇದೆ ಎಂದು ಬಂಧನದ ನಂತರ ನಡೆದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಫೆ.12 ರಂದು ಪೊಲ್ಲಾಚಿಯಲ್ಲಿ 19 ವರ್ಷದ ಯುವತಿಗೆ ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿ ಅದನ್ನು ವಿಡಿಯೋ ಚಿತ್ರೀಕರಣ ಮಾಡಿರುವ ಘಟನೆಯಲ್ಲಿ ನಾಲ್ವರನ್ನು ಬಂಧಿಸಿದ ಘಟನೆಯ ಬೆನ್ನಲ್ಲೇ ನಾಗಟ್ಟಿಣಂ ನಲ್ಲಿಈ ಘಟನೆ ನಡೆದಿದೆ. 
ಬಂಧಿತ ಚಾಲಕ ಸುಂದರ್ ವಿರುದ್ಧ 22 ವರ್ಷದ ಯುವತಿಯ ಪೋಷಕರು ದೂರು ನೀಡಿದ್ದು,  ಈ ವ್ಯಕ್ತಿ ಮದುವೆಯಾಗಿ ನಂಬಿಸಿ ಹಲವು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಲೈಂಗಿಕವಾಗಿ ಬಳಸಿಕೊಂಡು, ಫೋಟೊ, ವಿಡಿಯೋ ಚಿತ್ರೀಕರಣ ಮಾಡಿರುವ ಕಾರು ಚಾಲಕ ಸುಂದರ್ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.