ರಾಫೆಲ್ ರಹಸ್ಯ ದಾಖಲೆ ಪುಟಗಳ ಬಹಿರಂಗ ಬೇಡ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಒತ್ತಾಯ
ರಾಫೆಲ್ ಫೈಟರ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಕೇಂದ್ರದ ಅನುಉಮತಿ ಇಲ್ಲದೆ ಬಹಿರಂಗಪಡಿಸಬಾರದು. ಇದಾಗಲೇ ಕೋರ್ಟ್ ಗೆ ನಿಡಿರುವ ದಾಖಲೆ ಪತ್ರಗಳ....

Published On :
ನವದೆಹಲಿ: ರಾಫೆಲ್ ಫೈಟರ್ ಜೆಟ್ ಒಪ್ಪಂದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಕೇಂದ್ರದ ಅನುಮತಿ ಇಲ್ಲದೆ ಬಹಿರಂಗಪಡಿಸಬಾರದು. ಇದಾಗಲೇ ಕೋರ್ಟ್ ಗೆ ನಿಡಿರುವ ದಾಖಲೆ ಪತ್ರಗಳ ಸಹ ಭದ್ರತಾ ಕಾರಣದಿಂದ ನ್ಯಾಯಾಲಯ ತೆಗೆದು ಹಾಕಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್, ಕೇಂದ್ರದ ಪರ ಸುಪ್ರೀಂ ಕೋರ್ಟ್ ನಲ್ಲಿ ಹಾಜರಾಗಿದ್ದು ಸಾಕ್ಷಿಗಳ ಕಾಯ್ದೆ (ಎವಿಡೆನ್ಸ್ ಆಕ್ಟ್) ಯಲ್ಲಿರುವ ಸೆಕ್ಷನ್ 123 ವಿಭಾಗ ಹಾಗೂ ಆರ್ ಟಿಐ ಕಾಯ್ದೆಯಲ್ಲಿರುವ ವಿಭಾಗಗಳನ್ನು ಹೆಸರಿಸಿ ವೇಣುಗೋಪಾಲ್ ಈ ವಾದ ಮಂಡಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ನೇತೃತ್ವದ ಪೀಠ ಈ ವಿಚಾರಣೆ ನಡೆಸಿದ್ದು ಕೇಂದ್ರದ ವಾದದ ಕುರಿತ ತನ್ನ ತೀರ್ಮಾನವನ್ನು ಕಾಯ್ದಿರಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
supreme courtRafale fighter jetರಾಫೆಲ್ ಫೈಟರ್ ಜೆಟ್K K Venugopalಸರ್ವೋಚ್ಚ ನ್ಯಾಯಾಲಯRafaleಕೆ. ಕೆ. ವೇಣುಗೋಪಾಲ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


