ಸೇನಾ ಪ್ರಶಸ್ತಿ ಘೋಷಣೆ: ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಗೆ ಪರಮ ವಿಶಿಷ್ಠ ಸೇವಾ ಪದಕ!
2018-19ನೇ ಸಾಲಿನ ಸೇನಾ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಭಾರತೀಯ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಪರಮ ವಿಶಿಷ್ಠ ಸೇವಾ ಪದಕ ಘೋಷಣೆ ಮಾಡಲಾಗಿದೆ.

Published On :
ನವದೆಹಲಿ: 2018-19ನೇ ಸಾಲಿನ ಸೇನಾ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಭಾರತೀಯ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರಿಗೆ ಪರಮ ವಿಶಿಷ್ಠ ಸೇವಾ ಪದಕ ಘೋಷಣೆ ಮಾಡಲಾಗಿದೆ.
ದೇಶದ ಸೈನಿಕರಿಗೆ ನೀಡುವ ಅತ್ಯುನ್ನತ ಗೌರವಕ್ಕೆ ಭಾರತೀಯ ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪಾತ್ರರಾಗಿದ್ದು, ಅವರಿಗೆ ಪರಮ ವಿಶಿಷ್ಠ ಸೇವಾ ಪದಕ ಘೋಷಣೆ ಮಾಡಲಾಗಿದೆ. ಅಂತೆಯೇ ಇತ್ತೀಚೆಗೆ ಕಣಿವೆ ರಾಜ್ಯ ಕಾಶ್ಮೀರದ ಕುಪ್ವಾರದಲ್ಲಿ ನಡೆದ ಉಗ್ರರ ವಿರುದ್ಧದ ಎನ್ ಕೌಂಟರ್ ನಲ್ಲಿ ಮೂವರು ಉಗ್ರರ ಹೆಡೆ ಮುರಿಕಟ್ಟಿದ 20 ಜಾಟ್ ರೆಜಿಮೆಂಟ್ ನ ಮೇಜರ್ ತುಷಾರ್ ಗೌಬಾ ಅವರಿಗೆ ಕೀರ್ತಿ ಚಕ್ರ ಪದಕ ಘೋಷಣೆ ಮಾಡಲಾಗಿದೆ.
ಉಳಿದಂತೆ ಸೆಪೋಯ್ ವ್ರಹ್ಮ ಪಾಲ್ ಸಿಂಗ್, ಸಿಆರ್ ಪಿಎಫ್ ಜವಾನ್ ರಾಜೇಂದ್ರ ಸಿಂಗ್ ನಾಯ್ನ್, ರವೀಂದ್ರ ಬಬ್ಬನ್ ಧನವಾಡೆ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಪದಕ ಘೋಷಣೆ ಮಾಡಲಾಗಿದೆ.
ಇದಲ್ಲದೆ 12 ಅಧಿಕಾರಿಗಳು ಮತ್ತು ಸೇನೆ ಜವಾನರು, ಮತ್ತು ಸಿಆರ್ ಪಿಎಫ್ ಹಲವು ಸೈನಿಕರು ಶೌರ್ಯ ಚಕ್ರ ಪದಕಕ್ಕೆ ಭಾಜನರಾಗಿದ್ದಾರೆ. ಇನ್ನು ಇಂದು ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಎಲ್ಲ ಸೈನಿಕರಿಗೆ ಪದಕ ನೀಡಿ ಗೌರವಿಸಲಾಗುತ್ತದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸೈನಿಕರಿಗೆ ಪದಕ ಪ್ರದಾನ ಮಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiIndian Armyಭಾರತೀಯ ಸೇನೆBipin Rawatಬಿಪಿನ್ ರಾವತ್Army MedalsShaurya ChakrasKirti Chakraಸೇನಾ ಪದಕಗಳುಶೌರ್ಯ ಚಕ್ರಗಳುಕೀರ್ತಿ ಚಕ್ರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


