ನಿಮಗೆ ಗೊತ್ತೆ..? ಪ್ರತೀ ಮೂವರು ಮೋದಿ ಬೆಂಬಲಿಗರ ಪೈಕಿ ಓರ್ವ ಉಳಿದ ಇಬ್ಬರಂತೆಯೇ ಮೂರ್ಖ..!
ಇದು ನಿಮಗೆ ಗೊತ್ತೆ..? ಪ್ರತೀ ಮೂವರು ಮೋದಿ ಬೆಂಬಲಿಗರ ಪೈಕಿ ಓರ್ವ ಉಳಿದ ಇಬ್ಬರಂತೆಯೇ ಮೂರ್ಖ ರಂತೆ..

Published On :
ನವದೆಹಲಿ: ಇದು ನಿಮಗೆ ಗೊತ್ತೆ..? ಪ್ರತೀ ಮೂವರು ಮೋದಿ ಬೆಂಬಲಿಗರ ಪೈಕಿ ಓರ್ವ ಉಳಿದ ಇಬ್ಬರಂತೆಯೇ ಮೂರ್ಖ ರಂತೆ..
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ನಾಯಕರ ಆರೋಪ-ಪ್ರತ್ಯಾರೋಪ, ವಾಗ್ದಾಳಿ, ಕಾಲೆಳೆಯುವಿಕೆ, ವ್ಯಂಗ್ಯದಂತಹ ಪ್ರಹಸನಗಳು ಮುಗಿಲು ಮುಟ್ಟಿದ್ದು, ಇದೀಗ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ, ಮೋದಿ ಬೆಂಬಲಿಗರ ಕಾಲೆಳೆದಿದ್ದಾರೆ. ಪುಲ್ವಾಮ ಉಗ್ರ ದಾಳಿ, ಅಭಿನಂದನ್ ವರ್ಧಮಾನ್ ಪ್ರಕರಣ, ವಾಯುದಾಳಿ ಕುರಿತು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಮ್ಯಾ ಇದೀಗ ನೇರವಾಗಿ ಮೋದಿ ಬೆಂಬಲಿಗರ ಕಾಲೆಳೆದಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮೋದಿ ಬೆಂಬಲಿಗರನ್ನು ಉದ್ದೇಶಿಸಿ ವ್ಯಂಗ್ಯವಾಡಿರುವ ರಮ್ಯಾ.. ಇದು ನಿಮಗೆ ಗೊತ್ತೆ..? ಪ್ರತೀ ಮೂವರು ಮೋದಿ ಬೆಂಬಲಿಗರ ಪೈಕಿ ಓರ್ವ ಉಳಿದ ಇಬ್ಬರಂತೆಯೇ ಮೂರ್ಖ ರಂತೆ ಎಂದು ಮೋದಿ ಫೋಟೋವೊಂದನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇದನ್ನು ತಮ್ಮ ನೆಚ್ಚಿನದ್ದು ಎಂದು ವ್ಯಂಗ್ಯ ಮಾಡಿದ್ದಾರೆ.
ಇನ್ನು ಈ ವಿಚಾರವನ್ನು ಸುದ್ದಿಸಂಸ್ಥೆಯೊಂದು ವರದಿ ಮಾಡಿದ್ದು, ಆ ಸಂಸ್ಥೆಗೂ ಧನ್ಯವಾದ ಹೇಳುವ ಮೂಲಕ ರಮ್ಯಾ ಆ ಸಂಸ್ಥೆಯ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ರಮ್ಯಾ ಅವರ ಈ ಟ್ವೀಟ್ ಗೆ ವ್ಯಾಪಕ ಪರ-ವಿರೋಧ ಟ್ವೀಟ್ ಗಳು ಹರಿದು ಬರುತ್ತಿದ್ದು, ಈ ಟ್ವೀಟ್ ವೈರಲ್ ಆಗಿದೆ.
Hey thanks for the support ANI! I knew you secretly thought so too @ishaan_ANI , ever since they outed you with that Bot story
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


