ದೇಶ

ಭಯೋತ್ಪಾದಕರಿಗೆ ಆರ್ಥಿಕ ನೆರವು: ಕಾಶ್ಮೀರಿ ಉದ್ಯಮಿಗಳ ಆಸ್ತಿ ಜಪ್ತಿಗೆ ಮುಂದಾದ ಇಡಿ

ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವವರ ವಿರುದ್ಧ ಪ್ರಮುಖ ಕಾರ್ಯಾಚರಣೆ ನಡೆಸಿರುವ ಜಾರಿ ನಿರ್ದೇಶನಾಲಯ ಕಾಶ್ಮೀರಿ ಉದ್ಯಮಿಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಾರಂಭಿಸಿದೆ.

ಭಯೋತ್ಪಾದಕರಿಗೆ ಆರ್ಥಿಕ ನೆರವು: ಕಾಶ್ಮೀರಿ ಉದ್ಯಮಿಗಳ ಆಸ್ತಿ ಜಪ್ತಿಗೆ ಮುಂದಾದ ಇಡಿ
ಭಯೋತ್ಪಾದಕರಿಗೆ ಆರ್ಥಿಕ ನೆರವು: ಕಾಶ್ಮೀರಿ ಉದ್ಯಮಿಗಳ ಆಸ್ತಿ ಜಪ್ತಿಗೆ ಮುಂದಾದ ಇಡಿ
Published On :
ನವದೆಹಲಿ: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುತ್ತಿರುವವರ ವಿರುದ್ಧ ಪ್ರಮುಖ ಕಾರ್ಯಾಚರಣೆ ನಡೆಸಿರುವ ಜಾರಿ ನಿರ್ದೇಶನಾಲಯ ಕಾಶ್ಮೀರಿ ಉದ್ಯಮಿಗೆ ಸೇರಿದ ಆಸ್ತಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಪ್ರಾರಂಭಿಸಿದೆ. 
ಶ್ರೀನಗರ ಮೂಲದ ಉದ್ಯಮಿ ಜಹೂರ್ ಅಹ್ಮದ್ ಶಾ ವಟಾಲಿಗೆ ಸೇರಿದ ಬಂಗಲೆ, ಫಾರ್ಮ್ ಹೌಸ್ ಸೇರಿದಂತೆ 25 ಆಸ್ತಿಗಳನ್ನು ಜಮ್ಮು-ಕಾಶ್ಮೀರ ಹಾಗೂ ದೇಶದ ಇತರ ಭಾಗಗಳಲ್ಲಿ ವಶಪಡಿಸಿಕೊಳ್ಳುವುದಕ್ಕೆ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. 
ಈ ಆಸ್ತಿಗಳನ್ನು ಖರೀದಿಸುವುದಕ್ಕೆ ಬಹುಪಾಲು ಹಣದ ಮೂಲ ಪಾಕಿಸ್ತಾನದ ಉಗ್ರ ಹಫೀಸ್ ಸಯೀದ್, ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ಶಂಕೆ ವ್ಯಕ್ತಪಡಿಸಿದೆ. 
ಉಗ್ರ ಹಫೀಜ್ ಸಯೀದ್ ನ ಆರ್ಥಿಕತೆಯನ್ನು ಭಾರತದಲ್ಲಿ ನಿರ್ವಹಣೆ ಮಾಡುತ್ತಿರುವ ಆರೋಪದಡಿ ಉದ್ಯಮಿ ಜಹೂರ್ ನ ವಿಚಾರಣೆ ನಡೆಸಲಾಗುತ್ತಿದೆ. ಎನ್ಐಎ ದಾಖಲಿಸಿರುವ ಪ್ರಕರಣವನ್ನು ಆಧರಿಸಿ ಇಡಿ ತನಿಖೆ ನಡೆಸಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.