ಕಳ್ಳರು ರಾಫೆಲ್ ದಾಖಲೆಗಳನ್ನು ಗುರುವಾರ ಹಿಂತಿರುಗಿಸಿರಬೇಕು; ಕಾಂಗ್ರೆಸ್ ನಾಯಕ ಚಿದಂಬರಂ ಟೀಕೆ
ರಫೆಲ್ ಯುದ್ಧ ವಿಮಾನದ ಒಪ್ಪಂದದ ದಾಖಲೆ ಬಗ್ಗೆ ಸರ್ಕಾರಿ ಪರ ವಕೀಲ ಕೆ ಕೆ ವೇಣುಗೋಪಾಲ್ ...

Published On :
ನವದೆಹಲಿ: ರಫೆಲ್ ಯುದ್ಧ ವಿಮಾನದ ಒಪ್ಪಂದದ ದಾಖಲೆ ಬಗ್ಗೆ ಸರ್ಕಾರಿ ಪರ ವಕೀಲ ಕೆ ಕೆ ವೇಣುಗೋಪಾಲ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಕದ್ದುಕೊಂಡ ಕಳ್ಳ ದಾಖಲೆಗಳನ್ನು ಹಿಂತಿರುಗಿಸಿರಬಹುದು ಎಂದಿದ್ದಾರೆ.
ಕೋರ್ಟ್ ಗೆ ಮತ್ತೆ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು, 'ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಕಳುವಾಗಿಲ್ಲ. ಮೂಲ ದಾಖಲೆಗಳ ಫೋಟೊಕಾಪಿಗಳನ್ನು ಅಕ್ರಮವಾಗಿ ರಕ್ಷಣಾ ಸಚಿವಾಲಯದ ಹೊರಗಿನವರಿಗೆ ನೀಡಲಾಗಿದೆ' ಎಂದು ಹೇಳಿದ್ದರು.
ಬುಧವಾರ ರಫೆಲ್ ದಾಖಲೆ ಕಳವಾಗಿದೆ ಎಂದಿದ್ದರು. ನಿನ್ನೆ ಅದು ಫೋಟೊಕಾಪಿ ಮಾಡಿದ ದಾಖಲೆ ಎಂದು ಹೇಳಲಾಗುತ್ತಿದೆ. ಅಂತಿಮ ಹಂತದಲ್ಲಿ ಸರ್ಕಾರ ಆಪಾದನೆಯಿಂದ ನುಣುಚಿಕೊಳ್ಳಲು ನೋಡುತ್ತಿದೆ. ಸಾಮಾನ್ಯ ಜ್ಞಾನಕ್ಕೆ ನಿಜಕ್ಕೂ ಸೆಲ್ಯೂಟ್ ಹೊಡೆಯಬೇಕು ಎಂದು ಚಿದಂಬರಂ ಸರ್ಕಾರವನ್ನು ಕುಟುಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


