ದೇಶ

ವಿಜಯ್ ನಟನೆಯ 'ಸರ್ಕಾರ್' ಸಿನಿಮಾ ಎಫೆಕ್ಟ್: ಸೆಕ್ಷನ್ 49ಪಿ ಬಗ್ಗೆ ಆಯೋಗದಿಂದ ಜಾಗೃತಿ

ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮತದಾನದ ಬಗ್ಗೆ ಅರಿವು ಮೂಡಿಸಲು ಚುನಾವಣಾ ಆಯೋಗ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ..

ವಿಜಯ್ ನಟನೆಯ 'ಸರ್ಕಾರ್' ಸಿನಿಮಾ ಎಫೆಕ್ಟ್: ಸೆಕ್ಷನ್ 49ಪಿ ಬಗ್ಗೆ ಆಯೋಗದಿಂದ ಜಾಗೃತಿ
ಸರ್ಕಾರ್ ಸಿನಿಮಾ ಸ್ಟಿಲ್
Published On :
ನವದೆಹಲಿ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮತದಾನದ ಬಗ್ಗೆ ಅರಿವು ಮೂಡಿಸಲು ಚುನಾವಣಾ ಆಯೋಗ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.
ಇತ್ತೀಚೆಗೆ ಭಾರತೀಯ ಚುನಾವಣಾ ಆಯೋಗ ಸೆಕ್ಷನ್ 49ಪಿ ಬಗ್ಗೆ ಅರಿವು ಮೂಡಿಸುವ ಜಾಹೀರಾತು ನೀಡಿದೆ, ತಮ್ಮ ಮತಗಳು ದುರುಪಯೋಗವಾಗುವುದಿಲ್ಲ ಎಂಬುದನ್ನು ತಿಳಿಸಿದೆ.
ಚುನಾವಣಾ ಸಿಬ್ಬಂದಿಯ ಪ್ರಮಾದದಂತಹ ನಾನಾ ಕಾರಣಗಳಿಂದ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಂಡ ಪರಿಸ್ಥಿತಿಯಲ್ಲಿ ಮತ್ತೆ ಮತ ಚಲಾಯಿಸುವ ಅವಕಾಶವನ್ನು ಈ ಸೆಕ್ಷನ್ 49ಪಿ ಕಲ್ಪಿಸುತ್ತದೆ. 
ಟೆಂಡರ್ ವೋಟಿಂಗ್ ಬಗ್ಗೆ ತಿಳಿಸುವ ಸೆಕ್ಷನ್ 49ಪಿ ಈಗ ಬೆಳಕಿಗೆ ಬರಲು ಕಾರಣ ತಮಿಳು ನಟ ವಿಜಯ್ ನಟಿಸಿರುವ 'ಸರ್ಕಾರ್' ಸಿನಿಮಾ. ಮುರುಗದಾಸ್ ನಿರ್ದೇಶನದಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗಿದ್ದು ಸೆಕ್ಷನ್ 49ಪಿ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆ. 
ಚಿತ್ರದ ಹೀರೋ ಮತ ಚಲಾಯಿಸಲು ಅಮೆರಿಕದಿಂದ ಭಾರತಕ್ಕೆ ಬರುತ್ತಾನೆ. ಆದರೆ ತನ್ನ ಮತವನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂದು ತಿಳಿದು ಬೇಸರಗೊಳ್ಳುತ್ತಾನೆ. ಚುನಾವಣಾ ನಿಯಮಗಳಲ್ಲಿನ ಸೆಕ್ಷನ್ 49ಪಿ ಮೂಲಕ ತನಗೆ ಮತ ಚಲಾಯಿಸುವ ಹಕ್ಕು ಕಲ್ಪಿಸಬೇಕೆಂದು ಕೋರ್ಟ್ ಮೆಟ್ಟಿಲೇರುತ್ತಾನೆ. ಕೋರ್ಟ್ ಅವರ ಪರವಾಗಿ ತೀರ್ಪು ನೀಡುತ್ತದೆ. ಇದರಿಂದ ಮತದಾನದ ಹಕ್ಕು ಕಳೆದುಕೊಂಡ ಲಕ್ಷಾಂತರ ಮಂದಿ ಇದೇ ಹಾದಿ ಹಿಡಿಯುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.