ಅಜ್ಮೀರ್ ಶರೀಫ್ ನಲ್ಲಿ ಪ್ರಧಾನಿ ಪರವಾಗಿ ನಖ್ವಿ ಅವರಿಂದ 'ಚಾದರ್' ಸಮರ್ಪಣೆ
ಖ್ವಾಜ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ 807ನೇ ವಾರ್ಷಿಕ ಉರುಸ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ 'ಚಾದರ್' ಸಮರ್ಪಿಸಿದರು.

Published On :
ಜೈಪುರ: ಖ್ವಾಜ ಮೊಯಿನುದ್ದೀನ್ ಚಿಸ್ತಿ ದರ್ಗಾದಲ್ಲಿ 807ನೇ ವಾರ್ಷಿಕ ಉರುಸ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ 'ಚಾದರ್' ಸಮರ್ಪಿಸಿದರು.
ಕ್ರಿ.ಶ1141-1236ರ ವರೆಗೆ ಜೀವಿಸಿದ್ದ ಸಂತ ಖ್ವಾಜಾ ಮೊಯಿನುದ್ದೀನ್ ಅವರ ದರ್ಗಾಕ್ಕೆ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ನಖ್ವಿ ಭೇಟಿ ನೀಡಿದರು. ಬುಲಂದ್ ದರ್ವಾಜಾದಲ್ಲಿ ಸಂದೇಶವನ್ನು ಓದಿದ ಸಚಿವರು, ದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು.
ಮೋದಿಯವರು ತಮ್ಮ ಸಂದೇಶದಲ್ಲಿ, ವಾರ್ಷಿಕ ಉರುಸ್ ಅಂಗವಾಗಿ ಖ್ವಾಜ ಮೊಯಿನುದ್ದೀನ್ ಅನುಯಾಯಿಗಳಿಗೆ ಶುಭ ಕೋರಿದ್ದಾರೆ. ವೈವಿಧ್ಯತೆಯಲ್ಲಿ ಏಕತೆಯು ದೇಶದ ಸೌಂದರ್ಯವಾಗಿದೆ. ನಮ್ಮ ದೇಶದ ಸಂತರು ಶಾಂತಿ ಮತ್ತು ಐಕ್ಯತೆಯ ಸಂದೇಶವನ್ನು ಎಲ್ಲ ಕಾಲಕ್ಕೂ ಸಾರಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿಯವರು ಒಬ್ಬ ಸೈನಿಕರಾಗಿದ್ದು, ಸಂತರು ಮತ್ತು ಸೂಫಿಗಳ ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ ಎಂದು ನಖ್ವಿ ಹೇಳಿದ್ದಾರೆ.
ನಮ್ಮ ದೇಶ ಭಯೋತ್ಪಾದನೆ ಮುಕ್ತವಾಗಲೆಂಬ ಪ್ರಾರ್ಥನೆಯನ್ನು ಗರೀಬ್ ನವಾಜ್ ಸ್ವೀಕರಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪ್ರಧಾನಿ ನರೇಂದ್ರ ಮೋದಿMukhtar Abbas NaqviPM Modichadarಅಜ್ಮೀರ್ ದರ್ಗಾಚಾದರ್ಮುಕ್ತಾರ್ ಅಬ್ಬಾಸ್ ನಖ್ವಿAjmer shrine
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


