ದೇಶ

ವೈರಲ್ ವೀಡಿಯೋ: ಅಧಿಕಾರಿಗಳ ಎದುರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಬಿಜೆಪಿ ಶಾಸಕ- ಸಂಸದರು!

ತಮ್ಮ ಪಕ್ಷದ ಕಾರ್ಯಕರ್ತರ ಎದುರೇ ಬಿಜೆಪಿ ಮುಖಂಡರಿಬ್ಬರು ಕೈ ಕೈ ಮಿಲಾಯಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ

ವೈರಲ್ ವೀಡಿಯೋ:  ಅಧಿಕಾರಿಗಳ ಎದುರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಬಿಜೆಪಿ ಶಾಸಕ- ಸಂಸದರು!
ಅಧಿಕಾರಿಗಳ ಎದುರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಬಿಜೆಪಿ ಶಾಸಕ- ಸಂಸದರು!
Published On :
ಲಖನೌ: ತಮ್ಮ ಪಕ್ಷದ ಕಾರ್ಯಕರ್ತರ ಎದುರೇ ಬಿಜೆಪಿ ಮುಖಂಡರಿಬ್ಬರು ಕೈ ಕೈ ಮಿಲಾಯಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಂತ ಕಬೀರ್ ನಗರದ ರಸ್ತೆಯೊಂದರ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಾಮಫಲಕದಲ್ಲಿ ತಮ್ಮ ಹೆಸರಿಲ್ಲ ಎನ್ನುವ ಕಾರಣದಿಂದ ಆಕ್ರೋಶಗೊಂಡ ಬಿಜೆಪಿ ಸಂಸದ ಶರದ್ ತ್ರಿಪಾಠಿ ತಮ್ಮದೇ ಪಕ್ಷದ ಶಾಸಕರಾದ ರಾಕೇಶ್​​ ಭಾಘೇಲ್ ಎನ್ನುವವರ ಮೇಲೆ ಹಲ್ಲೆ ಮಾಡಿದ್ದಾರೆ.
ಇಬ್ಬರೂ ನಾಯಕರ ನಡುವೆ ಮಾತಿಗೆ ಮಾತು ಬೆಳೆದು ಈ ವೇಳೆ ಸಂಸದ ತ್ರಿಪಾಠಿ ತಮ್ಮ ಬೂಟಿನಿಂದ ಶಾಸಕರನ್ನು ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಶಾಸಕ ರಾಕೇಶ್ ಸಹ ಸಂಸದರಿಗೆ ಥಳಿಸಿದ್ದಾರೆ.
ಬಿಜೆಪಿ ಸ್ಥಳೀಯ ನಾಯಕರು ತಮ್ಮ ಮುಖಂಡರಿಬ್ಬರ ಈ ಜಗಳ ಬಿಡಿಸಲು ಸಹ ಮುಂದಾಗಿದ್ದು ಕಡೆಗೂ ಹಿರಿಯ ಪೋಲೀಸ್ ಅಧಿಕಾರಿಯೊಬ್ಬರು ಈ ಜಗಳ ಬಿಡಿಸಲು ಯಶಸ್ವಿಯಾಗಿದ್ದಾರೆ.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಏರ್ಪಾಡಾಗಿದ್ದ ಸಭೆಯಲ್ಲೇ ಈ ಕಿತ್ತಾಟ ನಡೆದಿದ್ದು ಸಭೆಯಲ್ಲಿ ಹಲವಾರ ಹಿರಿಯ ಅಧಿಕಾರಿಗಳು ಸಹ ಭಾಗವಹಿಸಿದ್ದರು.ಇನ್ನು ಸಂಸದ-ಶಾಸಕರ ನಡುವಿನ ಈ ಜಗಳ, ಹಲ್ಲೆಯ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಚಎಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.