ಅತ್ಯಾಚಾರ ಮಾಡಿ, ಜೀವಂತ ಸುಡಲು ಹೋಗಿ ತಾನೇ ಆಸ್ಪತ್ರೆ ಪಾಲಾದ ಕಾಮುಕ, ಸಂತ್ರಸ್ಥೆಯ ದಿಟ್ಟತನಕ್ಕೆ ಪೊಲೀಸರೇ ಗಾಬರಿ!
ಮಹಿಳೆಯೊಬ್ಬಳನ್ನು ಅತ್ಯಾಚಾರ ಮಾಡಿ ಬಳಿಕ ಆಕೆಯನ್ನು ಜೀವಂತವಾಗಿ ಸುಡಲು ಯತ್ನಿಸಿದ ಕಾಮುಕನಿಗೆ ಸಂತ್ರಸ್ಥೆ ಮಹಿಳೆ ಸರಿಯಾದ ಬುದ್ಧಿ ಕಲಿಸಿದ್ದು, ಬೆಂಕಿಯೊಂದಿಗೆ ಆತನನ್ನೂ ತಬ್ಬಿ ಹಿಡಿಯುವ ಮೂಲಕ ಆತ ಆಸ್ಪತ್ರೆ ಪಾಲಾಗುವಂತೆ ಮಾಡಿದ್ದಾಳೆ.

Published On :
ಮಾಲ್ಡಾ: ಮಹಿಳೆಯೊಬ್ಬಳನ್ನು ಅತ್ಯಾಚಾರ ಮಾಡಿ ಬಳಿಕ ಆಕೆಯನ್ನು ಜೀವಂತವಾಗಿ ಸುಡಲು ಯತ್ನಿಸಿದ ಕಾಮುಕನಿಗೆ ಸಂತ್ರಸ್ಥೆ ಮಹಿಳೆ ಸರಿಯಾದ ಬುದ್ಧಿ ಕಲಿಸಿದ್ದು, ಬೆಂಕಿಯೊಂದಿಗೆ ಆತನನ್ನೂ ತಬ್ಬಿ ಹಿಡಿಯುವ ಮೂಲಕ ಆತ ಆಸ್ಪತ್ರೆ ಪಾಲಾಗುವಂತೆ ಮಾಡಿದ್ದಾಳೆ.
ಈ ಘೋರ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದ್ದು, 35 ವರ್ಷದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಸಾಯಿಸಲು ಹೋಗಿ ತಾನೇ ಆಸ್ಪತ್ರೆ ಸೇರಿದ್ದಾನೆ. ಇಲ್ಲಿನ ಸುಭಾಷ್ ಕಾಲೋನಿಯಲ್ಲಿ ವಾಸವಾಗಿರುವ ಮಹಿಳೆಯ ಮನೆಗೆ ತೆರಳಿದ್ದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಬೆಂಕಿ ಹಚ್ಚಿ ಮನೆಯಲ್ಲೇ ಆಕೆಯನ್ನು ಸಾಯಿಸಲು ನೋಡಿದ್ದ. ಬೆಂಕಿಯ ಬೇಗುದಿಯಲ್ಲಿ ಬೇಯುತ್ತಿದ್ದ ಮಹಿಳೆ ಕೂಡಲೇ ಆತನನ್ನು ಗಟ್ಟಿಯಾಗಿ ತಬ್ಬಿಕೊಂಡು ತನ್ನ ಜೊತೆ ಆತನೂ ಸಾಯಬೇಕೆಂದು ನಿರ್ಧರಿಸಿದ್ದಳು.
ಮನೆಯ ಒಳಗಿಂದ ಹೊಗೆ ಕಂಡುಬಂದಿದ್ದರಿಂದ ಸ್ಥಳೀಯರು ಬಾಗಿಲು ಒಡೆದು ನೋಡಿದ್ದಾರೆ. ಆಗ ಅವರಿಬ್ಬರೂ ಬೆಂಕಿಯೊಳಗೆ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಬೆಂಕಿ ನಂದಿಸಿ ಇಬ್ಬರನ್ನೂ ಮಾಲ್ಡಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆ ಮಹಿಳೆ ಮಾಲ್ಡಾ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿತಿದ್ದು, ಅವರ ಕೈ ಮತ್ತು ಮುಖದ ಮೇಲೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಂತೆಯೇ ಆಕೆಯ ಮೇಲೆ ಅತ್ಯಾಚಾರ ವೆಸಗಿದ್ದ ಕಾಮುಕನಿಗೂ ಸುಟ್ಟ ಗಾಯಗಳಾಗಿದ್ದು, ಆತನಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಪೊಲೀಸರಿಗೆ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿರುವ ಮಹಿಳೆ, ನನ್ನ ಗಂಡ ತೀರಿ ಹೋಗಿ ಸಾಕಷ್ಟು ವರ್ಷವಾಯಿತು. ಮೂರು ಹೆಣ್ಣುಮಕ್ಕಳಿದ್ದಾರೆ. ಅವರೆಲ್ಲರೂ ಹೊರಗೆ ಹೋಗಿದ್ದರು. ಆ ವ್ಯಕ್ತಿ ಆಗಾಗ ನಮ್ಮ ಮನೆಗೆ ಬಂದು ಕಾಟ ನೀಡುತ್ತಿದ್ದ. ಸೋಮವಾರ ಯಾರೂ ಇಲ್ಲದಿದ್ದಾಗ ನಮ್ಮ ಮನೆಗೆ ಬಂದ ಆತ ನನ್ನ ಮೇಲೆ ಅತ್ಯಾಚಾರ ನಡೆಸಿ, ರೂಮಿನಲ್ಲೇ ಬೆಂಕಿ ಹಚ್ಚಿದ. ಆಗ ನಾನಂತೂ ಸಾಯೋದು ಖಚಿತ ಎಂದು ಗೊತ್ತಾಗುತ್ತಿದ್ದಂತೆ ಆತನನ್ನು ಗಟ್ಟಿಯಾಗಿ ತಬ್ಬಿಕೊಂಡೆ. ಆತನಿಗೂ ಬೆಂಕಿ ಹೊತ್ತಿಕೊಂಡಿತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


