ಬಾಲಾಕೋಟ್ ಏರ್ ಸ್ಟ್ರೈಕ್ ಟಾರ್ಗೆಟ್ ಮಿಸ್ ಆಗಿಲ್ಲ; ಭಾರತೀಯ ವಾಯುಸೇನೆ ಕೊಟ್ಟ ಪುರಾವೆ!
ಬಾಲಾಕೋಟ್ ನ ಜೈಷ್ ಇ ಮೊಹಮ್ಮದ್ ಉಗ್ರ ಕ್ಯಾಂಪ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ್ದ ಏರ್ ಸ್ಟ್ರೈಕ್ ಕುರಿತು ಪ್ರತಿಪಕ್ಷಗಲು ಸಂಶಯ ವ್ಯಕ್ತಪಡಿಸಿದ್ದು ಇದಕ್ಕೆ ಪುರಾವೆ ನೀಡಿರುವ ಐಎಎಫ್...

Published On :
ನವದೆಹಲಿ: ಬಾಲಾಕೋಟ್ ನ ಜೈಷ್ ಇ ಮೊಹಮ್ಮದ್ ಉಗ್ರ ಕ್ಯಾಂಪ್ ಮೇಲೆ ಭಾರತೀಯ ವಾಯುಸೇನೆ ನಡೆಸಿದ್ದ ಏರ್ ಸ್ಟ್ರೈಕ್ ಕುರಿತು ಪ್ರತಿಪಕ್ಷಗಳು ಸಂಶಯ ವ್ಯಕ್ತಪಡಿಸಿದ್ದು ಇದಕ್ಕೆ ಪುರಾವೆ ನೀಡಿರುವ ಐಎಎಫ್ ಶೇಕಡ 80ರಷ್ಟು ಬಾಂಬ್ ಗಳು ಟಾರ್ಗೆಟ್ ಮೇಲೆ ಬಿದ್ದಿವೆ ಎಂದ ಹೇಳಿದೆ.
ಪಾಕಿಸ್ತಾನದ ರೇಡಾರ್ ಗಳ ದಿಕ್ಕು ತಪ್ಪಿಸಿ ನಮ್ಮ ಮಿರಾಜ್ 2000 ಯುದ್ಧ ವಿಮಾನಗಳು ಬಾಲಾಕೋಟ್ ಉಗ್ರ ಶಿಬಿರಗಳ ಮೇಲೆ ನಡೆಸಿದ ವಾಯುದಾಳಿ ವೇಳೆ ಬಾಂಬ್ ಗಳು ಶೇಕಡ 80ರಷ್ಟು ನಿಖರ ಗುರಿಗಳ ಮೇಲೆಯೇ ಬಿದ್ದಿವೆ ಎಂದು ಭಾರತೀಯ ವಾಯುಪಡೆ ಹೇಳಿದೆ.
ಈ ಕುರಿತು ಐಎಎಫ್ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಸುದೀರ್ಘ ವರದಿಯಲ್ಲಿ ವಾಯುಪಡೆ ಈ ಸ್ಪಷ್ಟನೆ ನೀಡಿದ್ದು ಅದಕ್ಕೆ ಪುರಾವೆಯಾಗಿ ದಾಳಿಯಿಂದ ಚಿಂದಿಯಾಗಿರುವ ಶಿಬಿರಗಳ ಹೈರೆಸಲ್ಯೂಷನ್ ಚಿತ್ರಗಳನ್ನು ಪೂರೈಸಿದೆ.
ಫೆಬ್ರವರಿ 26ರ ವಾಯುದಾಳಿಯಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳು ಧ್ವಂಸಗೊಂಡಿರುವ ಹಾಗೂ ಸತ್ತ ಉಗ್ರರ ಸಂಖ್ಯೆ ಬಗ್ಗೆ ಕರಾರುವಕ್ಕಾದ ಮಾಹಿತಿ ನೀಡುವಂತೆ ಪ್ರತಿಪಕ್ಷಗಳು ಸರ್ಕಾರವನ್ನು ಆಗ್ರಹಿಸುತ್ತಿರುವ ಹೊತ್ತಿನಲ್ಲಿಯೇ ವಾಯುಪಡೆ ಈ ವರದಿ ಸಲ್ಲಿಸಿದೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತPakistanಪಾಕಿಸ್ತಾನsatellite imageIAF Air strikeಐಎಎಫ್ ಏರ್ ಸ್ಟ್ರೈಕ್Balakot Airstrikeಸ್ಯಾಟಲೈಟ್ ಇಮೇಜ್ಬಾಲಾಕೋಟ್ ಏರ್ ಸ್ಟ್ರೈಕ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


