'ಮತ್ತೆ ಪುಲ್ವಾಮ ಮಾದರಿ ಸಂಭವಿಸಿದರೆ ಭಾರತದ ಬಳಿ ಎಲ್ಲಾ ಆಯ್ಕೆಗಳೂ ಮುಕ್ತವಾಗಿವೆ'
ಭಾರತದಲ್ಲಿ ಇನ್ನೊಂದೇ ಒಂದು ಪುಲ್ವಾಮ ದಾಳಿ ಮಾದರಿಯ ದಾಳಿ ನಡೆದರೆ ನಮ್ಮ ಬಳಿ ಎಲ್ಲಾ ಆಯ್ಕೆಗಳೂ ಮುಕ್ತವಾಗಿವೆ ಎಂದು ಅಧಿಕಾರಿಗಳ ಮೂಲಗಳು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಗೆ ನೀಡಿದೆ.

Published On :
ನವದೆಹಲಿ: ಭಾರತದಲ್ಲಿ ಇನ್ನೊಂದೇ ಒಂದು ಪುಲ್ವಾಮ ದಾಳಿ ಮಾದರಿಯ ದಾಳಿ ನಡೆದರೆ ನಮ್ಮ ಬಳಿ ಎಲ್ಲಾ ಆಯ್ಕೆಗಳೂ ಮುಕ್ತವಾಗಿವೆ ಎಂದು ಅಧಿಕಾರಿಗಳ ಮೂಲಗಳು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಗೆ ನೀಡಿದೆ.
ಉಗ್ರವಾದದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಪಾಕಿಸ್ತಾನವನ್ನು ಆಗ್ರಹಿಸುವುದನ್ನು ಮುಂದುವರೆಸುವುದಾಗಿ ಹೇಳಿರುವ ಭಾರತ ಸರ್ಕಾರ, ಈ ಮಧ್ಯೆ ಪಾಕಿಸ್ತಾನದಿಂದ ಭಾರತದ ವಿರುದ್ಧ ಎಫ್-16 ಬಳಕೆ ಮಾಡಿರುವ ದಾಖಲೆಗಳನ್ನೂ ಅಮೆರಿಕಾಗೆ ತಲುಪಿಸಿದೆ.
ಪಾಕಿಸ್ತಾನದ ಬಾಲಕೋಟ್ ನಲ್ಲಿ ವೈಮಾನಿಕ ದಾಳಿ ನಡೆಸಿದ ಬಳಿಕ ಭಾರತ ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚುವಂತೆ ಮಾಡುತ್ತಿದೆ. ಜೊತೆ ಜೊತೆಗೇ ತನ್ನ ಸೇನೆಯನ್ನೂ ಸನ್ನದ್ಧವಾಗಿಟ್ಟುಕೊಂಡಿದ್ದು, ಮತ್ತೊಂದು ಉಗ್ರ ದಾಳಿಗೆ ಅವಕಾಶ ನೀಡದೇ ಇರಲು ಕ್ರಮ ಕೈಗೊಂಡಿದೆ. ಆದರೆ ಪಾಕಿಸ್ತಾನ ತನ್ನ ಎಂದಿನ ಚಾಳಿಯನ್ನು ಮುಂದುವರೆಸಿದ್ದೇ ಆದಲ್ಲಿ ತನ್ನ ಮುಂದಿರುವ ಎಲ್ಲಾ ಆಯ್ಕೆಗಳಿಗೂ ಮುಕ್ತವಾಗಿದೆ ಎನ್ನುತ್ತಿದೆ ಭಾರತ ಸರ್ಕಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


