ದೇಶ

ಏರ್ ಸ್ಟ್ರೈಕ್ ಮಿಲಿಟರಿ ಕಾರ್ಯಾಚರಣೆಯಲ್ಲ, ನಾಗರಿಕರಿಗೆ ಯಾವುದೇ ಹಾನಿ ಆಗಿಲ್ಲ- ರಕ್ಷಣಾ ಸಚಿವೆ

ಬಾಲಕೋಟ್ ಎರ್ ಸ್ಟ್ರೈಕ್ ಮಿಲಿಟರಿ ಕಾರ್ಯಾಚರಣೆ ಅಲ್ಲ, ಹೀಗಾಗಿ ಯಾವುದೇ ನಾಗರಿಕರಿಗೂ ಏನು ತೊಂದರೆಯಾಗಲಿಲ್ಲ ಎಂದು ರಕ್ಷಣೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಏರ್ ಸ್ಟ್ರೈಕ್ ಮಿಲಿಟರಿ ಕಾರ್ಯಾಚರಣೆಯಲ್ಲ, ನಾಗರಿಕರಿಗೆ ಯಾವುದೇ ಹಾನಿ ಆಗಿಲ್ಲ- ರಕ್ಷಣಾ ಸಚಿವೆ
ನಿರ್ಮಲಾ ಸೀತಾರಾಮನ್
Published On :

ನವದೆಹಲಿ: ಕಳೆದ ವಾರ ಜೈಷ್ - ಇ- ಮೊಹಮ್ಮದ್ ಉಗ್ರರ ಅಡಗು ತಾಣಗಳನ್ನು ಗುರಿಯಾಗಿರಿಸಿ ಭಾರತೀಯ ವಾಯುಪಡೆ ನಡೆಸಿದ ಬಾಲಕೋಟ್ ಎರ್ ಸ್ಟ್ರೈಕ್  ಮಿಲಿಟರಿ ಕಾರ್ಯಾಚರಣೆ ಅಲ್ಲ, ಹೀಗಾಗಿ ಯಾವುದೇ ನಾಗರಿಕರಿಗೂ ಏನು ತೊಂದರೆಯಾಗಲಿಲ್ಲ ಎಂದು ರಕ್ಷಣೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ವಾಯುದಾಳಿ ಕುರಿತಂತೆ  ಕೇವಲ ಹೇಳಿಕೆ ಮಾತ್ರ ನೀಡಿದ್ದಾರೆ. ಆದರೆ, ದಾಳಿಯಿಂದಾದ ಹಾನಿ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ, ಅದು ಸರ್ಕಾರದ ಸ್ಥಿತಿಯಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಬಾಲಕೋಟ್ ನಲ್ಲಿ  ಜೈಷ್- ಇ- ಮೊಹಮ್ಮದ್ ಕ್ಯಾಂಪಿನ ಮೇಲೆ ನಡೆಸಿರುವ ದಾಳಿ ಮಿಲಿಟರಿಯೇತರ ದಾಳಿ ಆಗಿದೆ ಎಂದು ಗೋಖಲೆ ಕಳೆದ ಗುರುವಾರ ಹೇಳಿಕೆ ನೀಡಿದ್ದರು.

ವಾಯುಪಡೆಯಿಂದಾದ ಸಾವಿನ ಸಂಖ್ಯೆ ಬಗ್ಗೆ ಮಾಹಿತಿ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ಬೆನ್ನಲ್ಲೇ ನಿರ್ಮಲಾ ಸೀತಾರಾಮನ್  ಈ ಹೇಳಿಕೆ ನೀಡಿದ್ದಾರೆ.

ವಾಯುಪಡೆಯ ವಾಯುದಾಳಿಯನ್ನು ಮುಂಬರುವ ಲೋಕಸಭಾ ಚುನಾವಣೆಯೊಂದಿಗೆ ಸೇರಿಸಿ ಮಾತನಾಡುವುದು ಸರಿಯಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.