ದೇಶ

ಜಮ್ಮು ಕಾಶ್ಮೀರ: ಕಣಿವೆಗೆ ಉರುಳಿದ ಬಸ್, 6 ಸಾವು,, 31 ಮಂದಿಗೆ ಗಾಯ

ಬಸ್ಸೊಂದು ಕಣಿವೆಗೆ ಬಿದ್ದು ಆರು ಮಂದಿ ಸಾವನ್ನಪ್ಪಿ 31ಕ್ಕೆ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ಜಮ್ಮು ಕಾಶ್ಮೀರದ ಉಧಂಪುರ್ ನಲ್ಲಿ ನಡೆದಿದೆ.

ಜಮ್ಮು ಕಾಶ್ಮೀರ: ಕಣಿವೆಗೆ ಉರುಳಿದ ಬಸ್, 6 ಸಾವು,, 31 ಮಂದಿಗೆ ಗಾಯ
ಜಮ್ಮು ಕಾಶ್ಮೀರ: ಕಣಿವೆಗೆ ಉರುಳಿದ ಬಸ್, 6 ಸಾವು,, 31ಮಂದಿಗೆ ಗಾಯ
Published On :
ಶ್ರೀನಗರ: ಬಸ್ಸೊಂದು ಕಣಿವೆಗೆ ಬಿದ್ದು ಆರು ಮಂದಿ ಸಾವನ್ನಪ್ಪಿ 31ಕ್ಕೆ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ  ಜಮ್ಮು ಕಾಶ್ಮೀರದ ಉಧಂಪುರ್ ನಲ್ಲಿ ನಡೆದಿದೆ.
ಉಧಂಪುರದ ಮಜಾಲ್ತಾ  ಎನ್ನುವಲ್ಲಿ ಶುಕ್ರವಾರ ಮಧ್ಯರಾತ್ರಿ ಈ ದುರ್ಘಟನೆ ಸಂಭವಿಸ್ದ್ದು ಮಹಿಳೆ ಸೇರಿ ಆರು ಮಂದಿ ಸಾವಿಗೀಡಾಗಿದ್ದಾರೆ. 31ಕ್ಕೆ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಉಧಂಪುರ್ ನಿಂದ ಶ್ರೀನಗರಕ್ಕೆ ಬಸ್ ಚಲಿಸುತ್ತಿತ್ತು. ಮಧ್ಯರಾತ್ರಿ ೧೨.೩೦ರ ವೇಳೆಗೆ ಚಾಲಕನ ನಿಯ್ತಂತ್ರಣ ತಪ್ಪಿದ ಬಸ್ ಕಣಿವೆಗೆ ಉರುಳಿದೆ. ಈ ವೇಳೆ ಐವರು ಸ್ಥಳದಲ್ಲೇ ಮೃತಪಟ್ಟರೆ ಓರ್ವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.
ದುರಂತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಅಎನ್ ಐ ವರದಿ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.