ಮಗ ಅಭಿನಂದನ್ ಬಗ್ಗೆ ಜನರು ತೋರಿಸುತ್ತಿರುವ ಅಭಿಮಾನ ಕಂಡು ಭಾವುಕರಾದ ಪೋಷಕರು; ವಿಡಿಯೋ!
ಪಾಕಿಸ್ತಾನ ಎಫ್-16 ಯುದ್ಧ ವಿಮಾನವಗಳನ್ನು ಹಿಮ್ಮೆಟ್ಟಿಸಲು ಮುಂದಾಗಿ ಆಕಸ್ಮಿಕವಾಗಿ ಅಲ್ಲಿನ ಸೇನೆಯ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಇಂದು ವಾಘಾ ಗಡಿ ಮೂಲಕ...

Published On :
ನವದೆಹಲಿ: ಪಾಕಿಸ್ತಾನ ಎಫ್-16 ಯುದ್ಧ ವಿಮಾನವಗಳನ್ನು ಹಿಮ್ಮೆಟ್ಟಿಸಲು ಮುಂದಾಗಿ ಆಕಸ್ಮಿಕವಾಗಿ ಅಲ್ಲಿನ ಸೇನೆಯ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಇಂದು ವಾಘಾ ಗಡಿ ಮೂಲಕ ಭಾರತಕ್ಕೆ ಮರಳಲಿದ್ದಾರೆ.
ಅಭಿನಂದನ್ ರನ್ನು ಭಾರತಕ್ಕೆ ಹಸ್ತಾಂತರಿಸುವ ಘೋಷಣೆ ಮಾಡಿದ್ದ ಪಾಕ್ ಇಂದು ಬಿಡುಗಡೆಗೆ ಮುಂದಾಗಿದೆ. ಇದೀಗ ದೇಶವೂ ಅವರ ಬರುವಿಕೆಗಾಗಿ ಎದುರು ನೋಡುತ್ತಿದ್ದು ವಾಘಾ ಗಡಿಯಲ್ಲಿ ಸಾಕಷ್ಟು ಜನರು ನೆರೆದಿದ್ದು ಅಭಿನಂದನ್ ರಿಗೆ ಜೈ ಹೋ ಎನ್ನುತ್ತಿದ್ದಾರೆ.
ಶತ್ರು ರಾಷ್ಟ್ರದ ವಶದಲ್ಲಿರುವ ಮಗ ಸುರಕ್ಷಿತವಾಗಿ ಹಿಂದಿರುಗಬೇಕೆಂದು ಕಾತುರದಿಂದ ಕಾಯುತ್ತಿದ್ದ ಅಭಿನಂದನ್ ಪೋಷಕರು ದೆಹಲಿಗೆ ಆಗಮಿಸಿದ್ದಾರೆ. ಅವರು ಚೆನ್ನೈ-ದೆಹಲಿ ವಿಮಾನದೊಳಗೆ ಬರುವ ವೇಳೆ ಒಂದು ಮಹತ್ವದ ಪ್ರಸಂಗವೂ ನಡೆಯಿತು.
ಅಭಿನಂದನ್ ತಂದೆ ಸಿಂಹಕುಟ್ಟಿ ವರ್ತಮಾನ್ ಅವರು ನಿವೃತ್ತ ಏರ್ ಮಾರ್ಷಲ್ ಆಗಿದ್ದರು. ತಾಯಿ ಶೋಭಾ ಹಾಗೂ ಸಿಂಹಕುಟ್ಟಿ ಅವರು ವಿಮಾನದೊಳಗೆ ಬರುತ್ತಿದ್ದಂತೆ ಸಹ ಪ್ರಯಾಣಿಕರು ಎದ್ದುನಿಂತು ಅವರಿಗೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


